ಕೆಲವು ಹಳೆಯ ಕಾರ್ಯಾಚರಣೆ ಪದ್ಧತಿ ಹೊಂದಿರುವ 18 ಸ್ಮಾರ್ಟ್ ಪೋನ್ ಗಳಲ್ಲಿ ವಾಟ್ಸ್ ಆ್ಯಪ್ ಅಕ್ಟೋಬರ್ 24 ರ ನಂತರ ಬಂದ್ ಆಗಿದೆ. ಹೊಸ ಮೊಬೈಲ್ ಗೆ ಅಪ್ ಗ್ರೇಡ್ ಆಗುವುದೊಂದೇ ಪರಿಹಾರ ಎಂದು ತಜ್ಞರು ಹೇಳಿದ್ದಾರೆ. ಆಂಡ್ರಾಯ್ಡ್ ಓಎಸ್ ನ 4.1 ಆವೃತಿ ಹೊಂದಿದ ಸ್ಮಾರ್ಟ್ ಪೋನ್ ಗಳನ್ನು ಈಗ ವಾಟ್ಸ್ ಆ್ಯಪ್ ಬೆಂಬಲಿಸುವುದಿಲ್ಲ. ನೆಕ್ಸಸ್ 7, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 2, ಎಚ್ ಟಿ ಸಿ ಒನ್, ಸೋನಿ ಎಕ್ಸ್ ಪೀರಿಯಾ ಜೆಡ್, ಮೋಟೊರೋಲಾ ಡ್ರಾಯಿಡ್ ರೇಜರ್ ಮತ್ತಿತರ ಸ್ಮಾರ್ಟ್ ಪೋನ್ ಗಳಲ್ಲಿ ವಾಟ್ಸ್ ಆ್ಯಪ್ ಸೇವೆ ಸ್ಥಗಿತವಾಗಿದೆ.
