ಭಟ್ಟರಿಂದ ಜಾನುವಾರು ಖರೀದಿಸಿ ವಧೆ ಮಾಡಲು ಕೊಂಡೊಯ್ಯುತ್ತಿದ್ದ ತೋಮಸ್, ಕಬೀರ್ ಮೇಲೂ ಎಫ್ ಐಆರ್
ಕ್ರಮ ಜಾನುವಾರು ಸಾಗಾಟದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಉಪ ನಿರೀಕ್ಷಕರಿಗೆ ಮಾಹಿತಿ ಬಂದ ಮೇರೆಗೆ, ಸದ್ರಿಯವರು ಠಾಣಾ ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿಯ ಸೋಮಂತಡ್ಕ ಮಂಜುಶ್ರೀ ಬಸ್ ನಿಲ್ದಾಣದ ಬಳಿ ತೆರಳಿ, ದನ ಸಾಗಾಟ ಮಾಡುತ್ತಿದ್ದ ಆರೋಪಿ ಬೆಳ್ತಂಗಡಿ ತೋಟತ್ತಾಡಿ ನಿವಾಸಿ ಅನಿಲ್ ಪಿ ಎಂಬಾತನು ಯಾವುದೇ ಪೂರ್ವಾನುಮತಿ ದಾಖಲೆಗಳನ್ನು ಪಡೆಯದೆ ಪಿಕ್ ಅಪ್ ವಾಹನದಲ್ಲಿ ಒಂದು ಜಾನುವಾರನ್ನು ಸಾಗಿಸುತ್ತಿರುವುದು ಪತ್ತೆಯಾಗಿರುತ್ತದೆ.
ಆರೋಪಿ ಬೆಳ್ತಂಗಡಿ ತೋಟತ್ತಾಡಿ ನಿವಾಸಿ ಅನಿಲ್ ಪಿ ಎಂಬಾತನು ಆತನನ್ನು ತೀವ್ರ ವಿಚಾರಣೆಗೊಳಪಸಿದಾಗ ಜಾನುವಾರನ್ನು ರಾಘವೇಂದ್ರ ಭಟ್ಟ ಎಂಬವರಿಂದ ಖರೀದಿಸಿ, ಮಾಂಸ ಮಾಡುವ ಸಲುವಾಗಿ ತಾನು ತೋಮಸ್ ತೋಟತ್ತಾಡಿ ಮತ್ತು ಕಕ್ಕಿಂಜೆ ಕಬೀರ್ ಎಂಬವರುಗಳೊಂದಿಗೆ ಸೇರಿ ಸಾಗಿಸುತ್ತಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ: 9/2026 ರಂತೆ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿ ನಿಯಮದಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
