ದೇಶದಲ್ಲಿ 2016 ರಿಂದ 2022 ರ ನಡುವಿನ ಅವಧಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.96 ರಷ್ಟು ಹೆಚ್ಚಳ

ರಾಷ್ಟ್ರೀಯ

ದೇಶದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ. 96 ರಷ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯುರೋ ( ಎನ್ ಸಿ ಆರ್ ಬಿ) ದತ್ತಾಂಶ ದಾಖಲಿಸಿ ಸ್ವಯಂ ಸೇವಾ ಸಂಸ್ಥೆ ‘ಮಕ್ಕಳ ಹಕ್ಕುಗಳು ಮತ್ತು ನೀವು’ ತನ್ನ ವರದಿಯಲ್ಲಿ ಹೇಳಿದೆ. 2016 ರಿಂದ 2022 ರ ನಡುವಿನ ಅವಧಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಸಂಖ್ಯೆ ಶೇಕಡಾ 96 ರಷ್ಟು ಹೆಚ್ಚಿದೆ ಎಂದು ಸ್ವಯಂ ಸೇವಾ ಸಂಸ್ಥೆ ‘ಮಕ್ಕಳ ಹಕ್ಕುಗಳು ಮತ್ತು ನೀವು’ ಸಂಸ್ಥೆ ಹೇಳಿದೆ.

“ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಬಳಿಕ ದೌರ್ಜನ್ಯ ಕುರಿತು ಪ್ರಕರಣ ದಾಖಲು ಮಾಡುವ ಪ್ರಮಾಣ ಹೆಚ್ಚಳವಾಗಿದೆ” ಎಂದು ಸಿಆರ್ ವೈ ಸಂಶೋಧನಾಂಶ ವಿಭಾಗದ ನಿರ್ದೇಶಕ ಶುಭೇಂದು ಭಟ್ಟಾಚಾರ್ಜಿ ಹೇಳಿದ್ದಾರೆ. “ಕಾನೂನು ಸುಧಾರಣೆಗಳು, ವಿವಿಧ ಸಮುದಾಯಗಳು ಮತ್ತು ಸಂಘಟನೆಗಳ ಸಹಕಾರ, ಮಾಧ್ಯಮಗಳು ದೌರ್ಜನ್ಯಗಳನ್ನು ಕೂಡಲೇ ವರದಿ ಮಾಡಿ ಸರಕಾರಗಳ ಗಮನ ಸೆಳೆಯುವ ಪ್ರಭಾವದಿಂದ ದೌರ್ಜನ್ಯದ ಮೇಲಿನ ಕೇಸುಗಳು ದಾಖಲಾಗಲು ಕಾರಣವಾಗಿದೆ” ಎಂದಿದ್ದಾರೆ.