ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಪತಿಯ ಸ್ವಭಾವದಿಂದ ಬೇಸತ್ತ ಪತ್ನಿ ಬೇರೆ ದಾರಿ ಕಾಣದೆ ಲೈಂಗಿಕ ಕ್ರಿಯೆಯಲ್ಲಿರುವಾಗಲೇ ಪತಿಯ ಜನನಾಂಗಕ್ಕೆ ಕಚ್ಚಿ ಗಾಯಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇತ್ತ ಪತಿ ಆಸ್ಪತ್ರೆ ದಾಖಲಾಗಿದ್ದಾನೆ. ಪತಿ ರಾಮು ನಿಶಾದ್ ಎಂಬವರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸಿಟ್ಟಿನಲ್ಲಿ ರೌದ್ರಾವತಾರ ತಾಳಿದ ಪತ್ನಿ ಈ ಕೃತ್ಯ ಎಸಗಿದ್ದು ಇದೀಗ ಈಗ ಪತಿಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾಳೆ.
ಪತಿ ರಾಮು ನಿಶಾದ್ ತನ್ನ ಪತ್ನಿಯ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯ ಮಾಡುತ್ತಿದ್ದನಂತೆ, ಇದಕ್ಕೆಲ್ಲಾ ಪತ್ನಿ ಒಪ್ಪಿಲ್ಲ, ನಂತರ ಇವರ ನಡುವೆ ವಾಗ್ವಾದ, ಹೈೊ ಕೈ ನಡೆದಿದೆ. ಕಡೆಗೆ ಕೋಪಗೊಂಡ ಪತ್ನಿ ಆತನ ಖಾಸಗಿ ಅಂಗಕ್ಕೆ ಕಚ್ಚಿ ಗಾಯಗೊಳಿಸಿದ್ದಾಳೆ. ಇದರಿಂದ ತೀವ್ರ ರಕ್ತಸ್ರಾವವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆತನ ಸ್ಥಿತಿ ಗಂಭೀರವಾಗಿದ್ದು, ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪತ್ನಿ ತನ್ನನ್ನು ಅಸ್ವಾಭಾವಿಕ ಲೈಂಗಿಕತೆ ಪತಿ ಬೇಡಿಕೆ ಮಾಡಿದ್ದರೆಂದು ಆರೋಪ ಮಾಡಿದ್ದಾರೆ. ಪತ್ನಿ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗಿದೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆಯಿಂದಲೇ ಹಲವು ದಂಪತಿಗಳು ಬೇರೆ ಬೇರೆಯಾಗಿದ್ದಾರೆ. ವಿಚ್ಚೇದನ ಬಯಸಿದ ಹಲವು ಅರ್ಜಿಗಳು ಕೋರ್ಟ್‌ನಲ್ಲಿವೆ. ಇದರ ನಡುವೆ ಈ ಪ್ರಕರಣ ಭಾರಿ ಸದ್ದು ಮಾಡುತ್ತಿದೆ.