ಇತ್ತೀಚೆಗೆ ರಾಮನಗರದಲ್ಲಿ ವಕೀಲರ ಸಂಘದ ಕಚೇರಿಗೆ ಬೇಟಿ ನೀಡಿದ ದಲಿತ ಸಂಘರ್ಷ ಸಮಿತಿಯ ಕೆಲವು ಪಧಾಧಿಕಾರಿಗಳ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆಂದು 40 ಮಂದಿ ವಕೀಲರ ವಿರುದ್ದ ದಲಿತ ದೌರ್ಜನ್ಯದಡಿಯಲ್ಲಿ ರಾಮನಗರದ ಐಜೂರು ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ಸಲ್ಲಿಸಿದ್ದರು. ಆದರೇ ದಿಢೀರ್ ಪ್ರಕರಣ ದಾಖಲಿಸದ ಪಿಎಸೈ ತನ್ವೀರ್ ಹುಸೇನ್ ವಿರುದ್ದ ದಲಿತ ಸಂಘರ್ಷ ಸಮಿತಿ ರಾಮನಗರ ಎಸ್ ಪಿ ಗೆ ದೂರು ಸಲ್ಲಿಸಿದ್ದರು. ಎಸ್ ಪಿ ಮಾರ್ಗದರ್ಶನದಲ್ಲಿ ರಾಮನಗರದ ವಕೀಲರ ಸಂಘದ ಕಚೇರಿಯಲ್ಲಿದ್ದ 40 ಮಂದಿ ವಕೀಲರುಗಳ ಮೇಲೆ ಐಜೂರ್ ಪಿಎಸೈ ತನ್ವಿರ್ ಹುಸೇನ್ ದಲಿತ ದೌರ್ಜನ್ಯದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದರು.
ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ರಾಮನಗರ ಜಿಲ್ಲಾ ವಕೀಲರ ಸಂಘ ದಿಢೀರ್ ಎಚ್ಚೆತ್ತುಕೊಂಡು ಸುಳ್ಳು ಮೊಕದ್ದಮ್ಮೆ ದಾಖಲಿಸಿರುವ ಪಿಎಸೈ ತನ್ವಿರ್ ಹುಸೇನ್ ರವರನ್ನು ಅಮಾನತ್ತುಗೊಳಿಸಬೇಕು ಮತ್ತು ಈ ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕು ಮತ್ತು ಹಾಗೂ ವಕೀಲರ ಹಿತ ರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯಾದಾದ್ಯಂತ ನ್ಯಾಯಾಲಯದ ಕಲಾಪದ ಮುನ್ನ ಪ್ರತಿಭಟನೆ ನಡೆಸಿದರು.

ಅತ್ತ ದಲಿತ ಸಂಘರ್ಷ ಸಮಿತಿಯವರು ರಾಮನಗರ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸದಸ್ಯರು ವಿವಿಧ ದಲಿತ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಪ್ರಕರಣ ದಾಖಲಿಸಲು ವಿಳಂಭನೀತಿ ಅನುಸರಿಸಿದ ಪಿಎಸೈ ರವರನ್ನು ಅಮಾನತ್ತು ಪಡಿಸಬೇಕೆಂದು ಒತ್ತಾಯಿಸಿ ರಾಮನಗರದಲ್ಲಿ ತಮಟೆ ಚಳುವಳಿ ಮಾಡಲು ತೀರ್ಮಾನಿಸಿದರು. ಇತ್ತ ವಕೀಲರು ದಲಿತ ಸಂಘರ್ಷ ಸಮಿತಿಯನ್ನು ಹೊರತು ಪಡಿಸಿ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಐಜೂರು ಪಿಎಸೈ ಅಮಾನತ್ತು ಪಡಿಸುವಂತೆ ಹಾಗೂ ಸುಳ್ಳು ಮೊಕದ್ದಮೆ ಹಿಂಪಡೆಯಬೇಕೆಂದು ಹಳೇ ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ರಾಮನಗರದ ದಲಿತ ಸಂಘರ್ಷ ಸಮಿತಿ ಹಾಗೂ ರಾಮನಗರದ ಜಿಲ್ಲಾ ವಕೀಲರ ಸಂಘಗಳ ನಡುವೆ ನಡೆದ ಜಟಾಪಟಿಯಲ್ಲಿ ಅಡಕತ್ತರಿಯಲ್ಲಿ ಸಿಲುಕಿದ ಪಿಎಸೈ ತನ್ವಿರ್ ಹುಸೇನ್. ಇತ್ತ ದೂರುದಾರರು ವಿರೋಧ ಅತ್ತ ಆರೋಪಿತರುಗಳು ವಿರೋಧ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸುತ್ತದಯೋ ಕಾದುನೋಡಬೇಕು.
ನ್ಯಾಯ ಕಾಪಾಡಬೇಕಾದ ನ್ಯಾಯವಾದಿಗಳು ಹಾಗೂ ಶಾಂತಿ ಕಾಪಾಡಬೇಕಾದ ಪೊಲೀಸರ ನಡುವೆ ಇತ್ತೀಚಿನ ದಿನಗಳಲ್ಲಿ ಸಂಘರ್ಷಗಳು ನಡೆಯುತ್ತಲೆ ಬರುತ್ತಿದ್ದು. ಹಾದಿ ರಂಪ ಬೀದಿರಂಪವಾದಂತಾಗಿದೆ. ಮಕ್ಕಳು ಸಹ ಪೊಲೀಸರೆಂದರೆ ಕ್ಯಾರೆ ಮಾಡದ ಪರಿಸ್ಥಿತಿ ಎದುರಾಗಿದೆ.
