ಮಂಗಳೂರು ಮನಪಾ: ಪೌರಕಾರ್ಮಿಕರ ಅಪಾಯಕಾರಿ ದೃಶ್ಯಾವಳಿ; ಅನಾಹುತ ನಡೆದರೆ ಯಾರು ಹೊಣೆ?

ಕರಾವಳಿ

ಇದು ಬುದ್ದಿವಂತರ ಜಿಲ್ಲೆಯ ನಮ್ಮ ಮಂಗಳೂರಿನ ಸ್ಮಾರ್ಟ್ ಸಿಟಿಯಲ್ಲಿ ಕಂಡುಬಂದಿರುವ ದೃಶ್ಯಾವಳಿ.!

ಇದು ಬುದ್ದಿವಂತರ ಜಿಲ್ಲೆಯ ನಮ್ಮ ಮಂಗಳೂರಿನ ಸ್ಮಾರ್ಟ್ ಸಿಟಿಯಲ್ಲಿ ಕಂಡುಬಂದಿರುವ ದೃಶ್ಯಾವಳಿ.!ಮಂಗಳೂರು ಮಹಾನಗರ ಪಾಲಿಕೆಯ ಕಸವಿಲೇವಾರಿ ಮಾಡುವ ಪೌರ ಕಾರ್ಮಿಕರು ತಮ್ಮ ವಾಹನದಲ್ಲಿ ನೇತಾಡಿಕೊಂಡು ಹೋಗುತ್ತಿದ್ದು, ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಅದು ಕೂಡ ಒಬ್ಬ ಮಹಿಳೆ ಈ ರೀತಿ ವಾಹನದಲ್ಲಿ ನೇತಾಡಿಕೊಂಡು ಮನೆ ಮನೆಗೆ ಕಸ ವಿಲೇವಾರಿಗೆ ತೆರಳುತ್ತಿರುವುದನ್ನು ನೋಡಿದರೆ ಮೈ ಜುಮ್ ಅನ್ನುತ್ತಿದೆ. ಇಂತಹ ದುಸ್ಸಾಹಸ, ಬೇಜಾವಾಬ್ದಾರಿಯ ಕೆಲಸದಿಂದ ಅವಘಡ ಸಂಭವಿಸಿದರೆ ಯಾರು ಹೊಣೆ.? ಅಧಿಕಾರಿಗಳು ಇತ್ತ ಗಮನಹರಿಸದೆ ಪಾಲಿಕೆಯಲ್ಲೇ ಮೇಯಲು ಕೂಂತಿರುವುದು ದೌರ್ಭಾಗ್ಯವೇ ಸರಿ.

ಮಂಗಳೂರು ಸಮೀಪದ ಕುಲಶೇಖರ ಕೋರ್ಡೆಲ್ ಹಾಲ್ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲೆ ಕದ್ರಿ ಮಾರ್ಕೇಟ್ ವರೆಗೂ ಪೌರಕಾರ್ಮಿಕೆಯೊಬ್ಬಳು ಕಸವಿಲೇವಾರಿ ವಾಹನದ ಪುಟ್ ಬೋರ್ಡಿನಲ್ಲೇ ನೇತಾಡಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.

ಮನೆಯಲ್ಲಿ ತಮ್ಮದೇ ಆದ ಕುಟುಂಬ ವರ್ಗ ಕಾಯುತ್ತಿರುತ್ತದೆ ಅನ್ನುವ ಯೋಚನೆಯನ್ನು ಕೂಡ ಮಾಡದೆ ಪೌರ ಕಾರ್ಮಿಕರು ಇಂತಹ ದುಸ್ಸಾಹಸಕ್ಕೆ ಇಳಿಯುತ್ತಿದ್ದಾರೆ. ಮಂಗಳೂರಿನಲ್ಲಿ ಪೌರ ಕಾರ್ಮಿಕರ ಇಂತಹ ಬೇಜವಾಬ್ದಾರಿತನ, ಅಧಿಕಾರಿಗಳ ನಿರ್ಲಕ್ಷತನ ಮಾಮೂಲಾಗಿದ್ದು, ಇವರ ಜೀವಕ್ಕೆ ಅಪಾಯ ಸಂಭವಿಸಿದರೆ ಯಾರು ಹೊಣೆ.? ಅವರ ಜೀವಕ್ಕೂ ಬೆಲೆಯಿದೆ. ಇನ್ನಾದರೂ ಮಂಗಳೂರು ಮಹಾನಗರ ಪಾಲಿಕೆ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಲಿ.