ಆಶೀರ್ವಾದ ನೀಡಲು ಮನೆಗೆ ಬಂದ ಧರ್ಮಗುರುವಿನಿಂದ ವೃದ್ಧ ದಂಪತಿಯ ಮೇಲೆ ರಾಕ್ಷಸೀ ಕೃತ್ಯ.!

ಕರಾವಳಿ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಯಾಲ್ತಡ್ಕ ಮನೇಲಿ ಚರ್ಚ್ ಧರ್ಮಗುರುವಿನ ಗೂಂಢಾಯಿಸಂ.!

ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79) ದಂಪತಿಗಳ ಮನೆಗೆ ಚರ್ಚ್ ನ ಧರ್ಮಗುರು ಫಾ.ನೆಲ್ಸನ್ ಓಲಿವೆರಾ ಮನೆ ಶುದ್ಧಗೊಳಿಸುವ ನಿಮಿತ್ತ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಧರ್ಮಗುರುಗಳು ವೃದ್ಧ ದಂಪತಿಗಳು ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದೆ ಇರುವ ಬಗ್ಗೆ ಮತ್ತು ಚರ್ಚ್‌ ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸದೇ ಇರುವ ಬಗ್ಗೆ ಅವಾಚ್ಯ ಶಬ್ದಗಳಿಂದ ವೃದ್ಧ ದಂಪತಿಗಳನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಕಾಲರ್ ಹಿಡಿದು ಮತ್ತೊಂದು ಗುಡಿಸಲಿಗೆ ಎಳೆದೊಯ್ದು ವೃದ್ಧ ದಂಪತಿಗಳಿಗೆ ಹಲ್ಲೆ ನಡೆಸುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ತಂದೆ-ತಾಯಿ ಸಮಾನರಾದ ಹಿರಿಯ ದಂಪತಿ ವಿರುದ್ಧ ಫಾ.ನೆಲ್ಸನ್ ತೋರಿದ ಅತಿರೇಕದ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮನೆಲ ಚರ್ಚ್ ವ್ಯಾಪ್ತಿಯ ನಿವಾಸಿಗಳು ಕೂಡ ಪಾದ್ರಿಯ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮುದಾಯದ ಹಲವರು ವಿಟ್ಲ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ತಲಪಾಡಿ, ಸಂಪಿಗೆ ಚರ್ಚ್ ಗಳಲ್ಲೂ ಫಾ.ನೆಲ್ಸನ್ ಇದೇ ರೀತಿ ದುರ್ವರ್ತನೆ ತೋರಿರುವ ಬಗ್ಗೆ ಸಮುದಾಯದಲ್ಲಿ ಚರ್ಚೆ ನಡೆಯುತ್ತಿದೆ. ಧರ್ಮಗುರುವಾಗಿ ಪಾ. ನೆಲ್ಸನ್‌ ತೋರಿರುವ ಅತಿರೇಕದ ವರ್ತನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿರಿಯ ದಂಪತಿಗಳ ಕುಟುಂಬಸ್ಥರು, ಸ್ಥಳೀಯರು ಪೊಲೀಸರಲ್ಲಿ ಆಗ್ರಹಿಸಿದ್ದಾರೆ.