ಬಾವಿಯೊಳಗೆ ಉಸಿರುಗಟ್ಟಿ ರಿಂಗ್ ಕಾರ್ಮಿಕರಿಬ್ಬರ ದುರ್ಮರಣ.! ಕೇಪು ಗ್ರಾಮದ ಪಡಿಬಾಗಿಲು ವಿದ್ಯಾಗಿರಿ ಶಾಲಾ ಸಮಿಪದಲ್ಲಿ ದುರ್ಘಟನೆ.!

ಕರಾವಳಿ

ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ನಿವಾಸಿ ಕುಕ್ಕಿಲ ಇಬ್ಬು@ಇಬ್ರಾಹಿಂ, ಸಾಲೆತ್ತೂರು ಸಮೀಪದ ಮಲಾರು ಅಲಿ ಮೃತ ಕಾರ್ಮಿಕರು. ಮೂವತ್ತು ಅಡಿ ಆಳದ ಕಾಂಕ್ರೀಟ್ ರಿಂಗ್ ಹಾಕಿದ್ದ ಅರ್ಧ ಮುಚ್ಚಿದ ಬಾವಿಯೊಳಗೆ ಇಳಿದಿದ್ದ ಕಾರ್ಮಿಕರು ಆಮ್ಲಜನಕ ಕೊರತೆಯಿಂದ ಉಸಿರುಗಟ್ಟಿ ಸಾವು.!

ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ರಿಂಗ್ ಇಳಿಸುವ ಕಾರ್ಯದಲ್ಲಿ ಪರಿಣಿತರಾಗಿದ್ದ ಕುಕ್ಕಿಲ ಇಬ್ಬು@ಇಬ್ರಾಹಿಂ ಸಾವಿರಾರು ಕೆರೆ-ಬಾವಿಗಳ ಕೆಲಸ ಮಾಡಿದ್ದ ಕಾರ್ಮಿಕರು.! ಮುಚ್ಚಳ ತೆಗೆದ ಬಳಿಕ ಬಾವಿಯೊಳಗೆ ಇಳಿದಿದ್ದ ಕಾರ್ಮಿಕ ಅಸ್ವಸ್ಥನಾಗಿದ್ದ ಕಾರಣ ಆತನನ್ನು ಮೇಲಕ್ಕೆತ್ತಲು ಇಳಿದಿದ್ದ ಇನ್ನೊಬ್ಬನೂ ಅಸ್ವಸ್ಥನಾಗಿ ಪ್ರಜ್ಞಾಹೀನಾಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ಮೃತದೇಹಗಳ ಮೇಲಕ್ಕೆತ್ತಿದ ಫ್ರೆಂಡ್ಸ್ ವಿಟ್ಲ ತಂಡ ಸ್ಥಳೀಯರ ಸಹಕಾರದಲ್ಲಿ ಮೃತದೇಹ ವಿಟ್ಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ವಿಟ್ಲ ಇನ್ಸ್ಪೆಕ್ಟರ್ ಹೆಚ್.ಇ.ನಾಗರಾಜ್ ಮತ್ತು ಸಿಬ್ಬಂದಿಗಳು. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.