ಕೋವಿಡ್ ವ್ಯಾಕ್ಸಿನ್ ತಯಾರಿಕಾ ಸಂಸ್ಥೆ ಅಸ್ಟ್ರಾಜೆನಿಕಾ ತಮ್ಮ ಲಸಿಕೆಯಿಂದ ಆರೋಗ್ಯದ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ಮೊದಲ ಬಾರಿಗೆ ಕೋರ್ಟ್ ನಲ್ಲಿ ಒಪ್ಪಿಕೊಂಡಿದೆ.
ಆಕ್ಸ್ ಫರ್ಡ್ ಅಸ್ಟ್ರಾಜೆನಿಕಾ ಕೋವಿಡ್ ವ್ಯಾಕ್ಸಿನ್ ಕಂಪನಿ ಕೋವಿಶೀಲ್ಡ್ ಮತ್ತು ವ್ಯಾಕ್ಸೇವರಿಯಾ ಎಂಬ ಎರಡು ಕೋವಿಡ್ ಲಸಿಕೆಗಳನ್ನು ತಯಾರಿಸಿದ್ದು ವಿಶ್ವದ ಹಲವೆಡೆ ಈ ಲಸಿಕೆಯನ್ನು ಹಂಚಲಾಗಿತ್ತು.
ಭಾರತದಲ್ಲೂ ಕೋವಿಶೀಲ್ಡ್ ಲಸಿಕೆ ಬಳಕೆಯಾಗಿದೆ. ಆದರೆ ಹಲವು ಕುಟುಂಬಗಳು ಈ ಸಂಸ್ಥೆಯ ಲಸಿಕೆ ಪಡೆದ ಬಳಿಕ ಗಂಭೀರ ಆರೋಗ್ಯ ಸಮಸ್ಯೆಗೆ ಗುರಿಯಾಗಿರುವ ಬಗ್ಗೆ ಕೋರ್ಟ್ ನಲ್ಲಿ ಆರೋಪ ಮಾಡಿದ್ದವು.

ಅನೇಕ ಆರೋಗ್ಯ ಸಮಸ್ಯೆಗಳು ವರದಿಯಾದ ಬಳಿಕ ಲಸಿಕೆ ತಯಾರಿಕಾ ಕಂಪನಿ ಕಾನೂನು ಹೋರಾಟ ನಡೆಸಿದ್ದು. ಜೆಮ್ಮಿ ಸ್ಕಾಟ್ ಎಂಬ ವ್ಯಕ್ತಿ ಲಸಿಕೆ ಪಡೆದ ಬಳಿಕ ಗಂಭೀರ ಮೆದುಳು ಸಮಸ್ಯೆಗೆ ಒಳಗಾಗಿರುವ ಬಗ್ಗೆ ಆರೋಪಿಸಿದ್ದರು. ಇನ್ನೂ ಹಲವರು ರಪ್ತು ಹೆಪ್ಪುಗಟ್ಟುವಿಕೆ, ಕಡಿಮೆ ಪ್ಲೇಟ್ ಲೆಟ್ ಕಣ ಸಮಸ್ಯೆಗೂ ಗುರಿಯಾಗಿದ್ದಾರೆ.
ಈ ಕೋವಿಡ್ ಲಸಿಕೆಯಿಂದ ಅನೇಕ ಸಮಸ್ಯೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಯುಕೆಯಲ್ಲಿ ಈ ಲಸಿಕೆಯ ಬಳಕೆಯನ್ನು ಬಂದ್ ಮಾಡಲಾಗಿದ್ದು, ಅಪರೂಪದ ಆರೋಗ್ಯ ಸಮಸ್ಯೆ ಬರಬಹುದು ಎಂಬ ವರದಿ ಬಳಿಕ ಲಸಿಕೆ ಬಳಕೆ ಮೇಲೆ ನಿಯಂತ್ರಣ ಹೇರಲಾಗಿದೆ. ಅನೇಕ ಕುಟುಂಬಗಳು ಪರಿಹಾರ ನೀಡಬೇಕೆಂದು ಕೋರಿವೆ.
