ನೆಲ್ಯಾಡಿ: ಗೋದಾಮಿಗೆ ನುಗ್ಗಿ ಅಡಿಕೆ ಕಳ್ಳತನ ಪ್ರಕರಣ; ಆರೋಪಿಗಳು ದೋಷಮುಕ್ತ

ಕರಾವಳಿ

ಆರು ವರ್ಷಗಳ ಹಿಂದೆ ನಲ್ಯಾಡಿ ಜಂಕ್ಷನ್ ನಲ್ಲಿದ್ದ ಕೆ. ಮೊಹಮ್ಮದ್ ಹನೀಫ್ ಎಂಬವರ ಅಡಿಕೆ ಗೋದಾಮಿನ ಕೊಠಡಿಯ ಶಟರ್ ಮುರಿದು, ಸರಿ-ಸುಮಾರು 250 ಕೆಜಿ ಅಡಿಕೆಯನ್ನು ಆರೋಪಿಗಳು ಕಳ್ಳತನ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣವನ್ನು ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು, ಚಪ್ಪ ಯಾನೆ ಸರ್ಪರಾಜ್ ಮತ್ತು ಅಬ್ದುಲ್ ಅಸ್ಪರ್ ಯಾನೆ ಅಸ್ಫಕ್ ಎಂಬುವರನ್ನು ಆರೋಪಿಗಳೆಂದು ಪರಿಗಣಿಸಿ ದೋಷಾರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸದ್ರಿ ಪ್ರಕರಣವನ್ನು ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಈ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು 21 ಸಾಕ್ಷಿಗಳ ಪೈಕಿ 14 ಸಾಕ್ಷಿಗಳನ್ನು ಮತ್ತು 22 ದಾಖಲೆಗಳನ್ನು ಅಭಿಯೋಜನ ಪರ ಗುರುತಿಸಲಾಗಿರುತ್ತದೆ. ಸದ್ರಿ ಪ್ರಕರಣವು ನ್ಯಾಯಾಲಯದಲ್ಲಿ ತನಿಖೆ ಹಂತದಲ್ಲಿರುವಾಗ ಸದರಿ ಪ್ರಕರಣದ ಪಿರ್ಯಾದಿದಾರ ಮೊಹಮ್ಮದ್ ಹನೀಫ್ ರವರು ಮೃತಪಟ್ಟಿದ್ದು, ಸದ್ರಿ ಪ್ರಕರಣದ ಮಹಜರು ಹಾಗೂ ಇನ್ನಿತರ ಸಾಕ್ಷಿಗಳು ಅಯೋಜನ ಪರ ಸಾಕ್ಷಿಯನ್ನು ನುಡಿಯದೇ ವಿರೋಧಬಾಸವಾಗಿ ಸಾಕ್ಷಿ ನುಡಿದ ಕಾರಣ ಹಾಗೂ ಯಾವುದೇ ಸ್ವತಂತ್ರ ಸಾಕ್ಷಿಗಳು ಇಲ್ಲದ ಕಾರಣ ಆರೋಪಿಗಳು ಈ ಕೃತ್ಯವನ್ನು ಮಾಡಿದ್ದಾರೆ ಎಂದು ಸಾಬೀತು ಪಡಿಸುವಲ್ಲಿ ಅಭಿಯೋಜನೆ ವಿಫಲಗೊಂಡಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಆರೋಪಿಗಳನ್ನು ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಯಂ ಎಫ್ ಸಿ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶರಾದ ಶ್ರೀಯುತ ಶಿವಣ್ಣ ಹೆಚ್. ಆರ್ ರವರು ಆರೋಪಿಗಳನ್ನು ಸದರಿ ಪ್ರಕರಣದಿಂದ ದೋಷ ಮುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ.

ಆರೋಪಿ ಅಸ್ಫಕ್ ರವರ ಪರವಾಗಿ ನ್ಯಾಯವಾದಿಗಳಾದ ಮಹೇಶ್ ಕಜೆ ಹಾಗೂ ಆರೋಪಿ ಸರ್ಫರಾಜ್ ಪರವಾಗಿ ನ್ಯಾಯವಾದಿ ಕುಮಾರನಾಥ್ ವಾದಿಸಿದ್ದರು.