ಸತತ ಸುರಿಯುವ ಮಳೆಯ ನಡುವೆ ಮುಳುಗು ತಜ್ಞ ಇಸ್ಮಾಯಿಲ್ ಕಾರ್ಯಾಚರಣೆ.. ಮೃತದೇಹ ಪತ್ತೆ
ಬೆಳ್ತಂಗಡಿ ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ, ಸಂಘಪರಿವಾರದ ಕಾರ್ಯಕರ್ತ ಪ್ರಸಾದ್ ಎಂಬವರು ಡಿಸೆಂಬರ್ 2 ರಂದು ಸಂಜೆ ನೇತ್ರಾವತಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ
ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ ನಗರದ ಇಸ್ಮಾಯಿಲ್ ಸತತ ಸುರಿಯುವ ಮಳೆಯ ನಡುವೆಯೂ ಮೃತದೇಹ ಮೇಲೆತ್ತಿದ್ದಾರೆ.
ಸಂಘದ ಪ್ರಚಾರಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಜಿಲ್ಲಾ ಸಂಯೋಜಕರಾಗಿದ್ದರು.
