ಮಂಗಳೂರು ನಗರದ ಬೈಕಂಪಾಡಿ ಸಮೀಪ ಜೂಜಾಡುತ್ತಿದ್ದ ಆರೋಪದಲ್ಲಿ 9 ಮಂದಿಯನ್ನು ಸಿಸಿಬಿ ಮತ್ತು ಪಣಂಬೂರು ಪೊಲೀಸರು ಜಂಟಿಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರಿಂದ ಬಂಧನವಾದ ಆರೋಪಿಗಳು ಹನೀಫ್, ಝಾಕೀರ್ ಅಹಮ್ಮದ್, ವಿಲ್ಪ್ರೇಡ್ ಡಿಸೋಜಾ, ಅನಿಲ್ ಕುಮಾರ್, ಮುರ್ತೋಝ ಸಾಬ್, ಶಶಿ ದೇವಾಡಿಗ, ಮೈಲಾರಪ್ಪ, ರಾಯ್ ಡಯಾಸ್, ಜೋನ್ ರಾಬರ್ಟ್ ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಬೈಕಂಪಾಡಿ ರೈಲು ಮಾರ್ಗದ ಬದಿಯಲ್ಲಿ ಜೂಜಾಡುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಆಟಕ್ಕೆ ಬಳಸಿದ್ದ 11,265 ರೂ. ನಗದು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ನಗರದಲ್ಲಿ ಹಲವಾರು ಐಶಾರಾಮಿ ಜುಗಾರಿ ಅಡ್ಡೆಗಳಿದ್ದು ನಗರ ಪೊಲೀಸರು ಈ ಅಡ್ಡೆಗಳ ಮೇಲೆ ದಾಳಿ ನಡೆಸಬೇಕಾಗಿದೆ.
