ಮೂಡಿಗೆರೆ ಇ.ಒ ಅಪರಾವತಾರ.! ಮುಕ್ಕುವುದನ್ನೇ ಕಾಯಕ ಮಾಡಿಕೊಂಡ ದಕ್ಷಿಣ ಕನ್ನಡ ಮೂಲದ ಅಧಿಕಾರಿ.!

ರಾಜ್ಯ

✍️. ಸಲಾವುದ್ದೀನ್ ಎಂ.ಎ

ಮೂಡಿಗೆರೆ ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ತಮ್ಮ ಕರ್ತವ್ಯವನ್ನು ನಿರ್ವಹಿಸದೆ ಕಾಲಹರಣ ಮಾಡುತ್ತಾ ಸಮಯ ಕಳೆಯುತ್ತಿದ್ದು ಇಂತಹ ಅಧಿಕಾರಿ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮೋಹನ್ ಎನ್.ಮಾಲೂರು ಒತ್ತಾಯಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಡಿಗೆರೆ ತಾಲ್ಲೂಕು ಪಂಚಾಯಿತಿಯಲ್ಲಿ ಹಿಂದೆಂದೂ ಕಂಡು ಕೇಳರಿಯದ ಬ್ರಹ್ಮಾಂಡ ಭಷ್ಟಾಚಾರ ನಡೆಯುತ್ತಿದ್ದು, ಅದಕ್ಕೆ ಪ್ರಮುಖ ರುವಾರಿಯೇ ಕಾರ್ಯನಿವಾಹಕ ಅಧಿಕಾರಿ ದಯಾವತಿ ಎಂ. ಇಲ್ಲಿ ಅಧಿಕಾರ ಸ್ವೀಕರಿಸಿ ನಂತರ ಕಾರ್ಯನಿರ್ವಹಣೆಯಲ್ಲಿ ತೊಡಗದೆ ಬರೀ ಹಣಕ್ಕಾಗಿ ತಮಗೆ ತೋಚಿದಂತೆ ಕೆಲಸಮಾಡುವುದು ಮತ್ತು ಹಿರಿಯ ಅಧಿಕಾರಿಗಳು ಹೇಳಿದ ಕೆಲಸವನ್ನು ಮಾಡದೆ ಇರುವುದು ಬೇಸರದ ಸಂಗತಿಯಾಗಿದೆ ಎಂದರು.

ಮೂಡಿಗೆರೆ ಪಟ್ಟಣದ ಆರ್‌ಟಿಐ ಕಾರ್ಯಕರ್ತರು ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನಲ್ಲಿ ದ್ವಿತಿಯ ದರ್ಜೆ ಕಾರ್ಯದರ್ಶಿಗಳನ್ನು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳನ್ನಾಗಿ ನಿಯೋಜಿಸಿದ್ದು ಕಾನೂನು ಬಾಹಿರ ಕ್ರಮವಾಗಿದ್ದು, ಇದನ್ನು ಹಿಂಪಡೆಯುವಂತೆ ದೂರು ಸಲ್ಲಿಸಲಾಗಿದ್ದರು ಯಾವುದೇ ಕ್ರಮ ಜರುಗಿಸದೆ ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅವರು ದೂರಿದರು.

ಮೂಡುಗೆರೆ ತಾಲ್ಲೂಕಿನ ಹಾಲೂರು ಶಾಲೆಯ ಶಿಕ್ಷಕಿ ಭಾರತಿ ಎಂಬುವವರು ವೈಧ್ಯಕೀಯ ಮರು ವೆಚ್ಚ ಪಡೆಯುವ ಸಲುವಾಗಿ ನಕಲಿ ದಾಖಲೆ ಸೃಷ್ಠಿಸಿ 3.40 ಲಕ್ಷ ರೂ ಸರಕಾರಕ್ಕೆ ಪಂಗನಾಮ ಹಾಕಿದ್ದ ವಿಚಾರವನ್ನು ದಾಖಲೆ ಸಮೇತ ನೀಡಿದ್ದರು, ಅದರ ಬಗ್ಗೆ ನಿರ್ಲಕ್ಷ ಭಾವ ತೋರಿಸುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

ಕಳಸ ಪಂಚಾಯತಿಯ ಗ್ರೇಡ್ ಒನ್ ಕಾರ್ಯದರ್ಶಿ ಪದ್ಮರಾಜ್ ಅವರನ್ನು ಕಾನೂನು ಬಾಹಿರವಾಗಿ ಎರಡು ಗ್ರಾಮ ಪಂಚಾಯತಿಗಳಿಗೆ ಪಂಚಾಯತಿ ಅಭಿವೃದ್ದಿ ಅಧಿಕಾರಿಯನ್ನಾಗಿ ನೇಮಿಸಿ, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವುದರ ಬಗ್ಗೆ ದೂರು ನೀಡಿದರು, ಯಾವುದೇ ಕ್ರಮ ಜರುಗಿಸದೇ ಇರುವುದು, ಕುಂದೂರಿನಲ್ಲಿ ಪಂಚಾಯತಿ ಅಭಿವೃದ್ದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಾಸುದೇವ್ ಎಂಬುವವರು ಸರ್ಕಾರದ ನಿಯಮ ಉಲ್ಲಂಘಿಸಿ ಪತ್ರಿಕಾ ಗ್ಯಾಲರಿಯಲ್ಲಿ ಪತ್ರಿಕೆಗೆ ವರದಿ ಮಾಡುತ್ತಿದ್ದು, ಇದರ ವಿರುದ್ದ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಳ್ಳದ ಕಾರ್ಯನಿವಾಹಕ ಅಧಿಕಾರಿ.

ಚುನಾವಣಾ ಸಮಯದಲ್ಲಿ ಎಂಸಿಸಿ ನೋಡಲ್ ಅಧಿಕಾರಿಯಾಗಿದ್ದ ಕಾರ್ಯನಿರ್ವಾಹಕ ಅಧಿಕಾರಿ ಚಕ್ ಪೋಸ್ಟ್ ನಲ್ಲಿ ಗೈರಾಗಿದ್ದ ಅಧಿಕಾರಿಗಳ ವಿರುದ್ದ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸದೇ ಇರುವ ಅಧಿಕಾರಿ. ಈ ಅಧಿಕಾರಿಯ ವಿರುದ್ದ ಹತ್ತು ಹಲವು ದೂರುಗಳು ಪ್ರತಿನಿತ್ಯ ಬರುತ್ತಿದ್ದರು ಜಿಲ್ಲಾ ಪಂಚಾಯತಿ ಸಿಇಓರವರು ಯಾವುದೇ ಕ್ರಮ ಜರುಗಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ.

ಕರ್ತವ್ಯದಲ್ಲಿ ಲೋಪವೆಸಗುವುದರ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವ ಮೂಡಿಗೆರೆ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ದಯಾವತಿ ಎಂ ವಿರುದ್ದ ಒಂದು ವಾರದಲ್ಲಿ ಕ್ರಮ ಜರುಗಿಸುವುದರೊಂದಿಗೆ ಸಿಇಒರವರು ದಯಾವತಿ. ಎಂ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದು, ತಪ್ಪಿದಲ್ಲಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವುದಾಗಿ ಅವರು ತಿಳಿಸಿದರು. ದಯಾವತಿ ಎಂ ರವರು ಮೂಲತ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ತಮ್ಮ ಕರ್ತವ್ಯ ಮುಗಿದ ಕೂಡಲೇ ಸರ್ಕಾರಿ ವಾಹನದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ತಮ್ಮ ಮನೆಗೆ ತೆರಳುವುದು ಇವರ ಪರಿಪಾಠವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ತನಿಖಾಠಾಣೆಯ ಲಾಗ್ ಬುಕ್ ಹಾಗೂ ಸಿಸಿ ಟಿವಿ ಪೊಟೇಜ್ ನಲ್ಲಿ ಇದರ ಮಾಹಿತಿ ಸಂಪೂರ್ಣ ಇದೆ. ಸರಕಾರಿ ವಾಹನವನ್ನು ದುರ್ಬಳಕೆಗೊಳಿಸುವ ಇಂತಹ ಅಧಿಕಾರಿಯ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.