ಮರ್ಯಾದೆ ಇಲ್ಲ ಅಂದ ಮೇಲೆ ಅಂತಹ ಕಡೆ ನಾವ್ಯಾಕೆ ಇರಬೇಕು. ರಾಜಿನಾಮೆಗೆ ಮುಂದಾದ ಶಾಸಕ ವಿನಯ್ ಕುಲಕರ್ಣಿ.!

ರಾಜ್ಯ

ನಮಗೆ ಮರ್ಯಾದೆ ಇಲ್ಲ ಅಂದ ಮೇಲೆ ಅಂತಹ ಕಡೆ ನಾವ್ಯಾಕೆ ಇರಬೇಕು ಎಂದು ಶಾಸಕ ವಿನಯ್ ಕುಲಕರ್ಣಿಯವರು ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಮೂಲಕ ಅವರು ರಾಜೀನಾಮೆ ನೀಡುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಸಚಿವರಾದ ನಂತರದಲ್ಲಿ ಬೈರತಿ ಸುರೇಶ್ ಅವರು ಎಲ್ಲದರಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ. ಈ ಸಂಬಂಧ ಈ ಹಿಂದೆಯೂ ಹೈಕಮಾಂಡ್ ಗೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ವಿನಯ್ ಕುಲಕರ್ಣಿ ನಗರಾಭಿವೃದ್ದಿ ಇಲಾಖೆಯ ವ್ಯಾಪ್ತಿಗೆ ಬರುವ ನೀರು ಪೂರೈಕೆ ನಿಗಮದ ಅಧ್ಯಕ್ಷರೂ ಆಗಿದ್ದಾರೆ. ಇದರಲ್ಲಿ ಅವರ ಬೆಂಬಲಿಗರಿಗೆ ಸೇರಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸಚಿವ ಬೈರತಿ ಸುರೇಶ್ ನಿರ್ದೇಶನದಂತೆ ಸೇರಿಸಲಾಗಿದೆ ಎಂಬ ಆರೋಪ ಇದಾಗಿದೆ. ಇದರಿಂದ ಅಸಮಾಧಾಗೊಂಡ ವಿನಯ್ ಕುಲಕರ್ಣಿ ಸಚಿವ ಬೈರತಿ ಸುರೇಶ್ ವಿರುದ್ಧ ಸಿಡಿದೆದ್ದಿದ್ದಾರೆ.