ನೀರುಮಾರ್ಗ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಹಮೀದ್ ಬಿತ್ತುಪಾದೆ ನಿಧನ

ಕರಾವಳಿ

ನೀರುಮಾರ್ಗ ಪರಿಸರದಲ್ಲಿ ಅಮ್ಮಿಯಾಕ ಎಂದೇ ಜನಪ್ರಿಯರಾಗಿದ್ದ ನೀರುಮಾರ್ಗ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಹಮೀದ್ ಇಂದು ಸಂಜೆ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.

ಸ್ಥಳೀಯವಾಗಿ ಜನಾನುರಾಯಿಯಾಗಿದ್ದ ಹಮೀದ್ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಹಲವು ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದರು. ಅಧ್ಯಕ್ಷರಾಗುವ ಅವಕಾಶ ಇದ್ದರೂ ಪಕ್ಷಕ್ಕಾಗಿ ತ್ಯಾಗ ಮಾಡಿದ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯರಾಗಿದ್ದುಕೊಂಡು ತಾವೇ ಮುಂದಾಳತ್ವ ವಹಿಸಿ ನೀರಿನ ಪೈಪ್, ಚರಂಡಿ ಇನ್ನಿತರ ಮೂಲಭೂತ ಸೌಕರ್ಯಗಳನ್ನು ನೆರವೇರಿಸಿಕೊಡುತ್ತಿದ್ದರು. ಅಮ್ಮಿ ಇದ್ದರೆ ಸಾಕು ಇಲ್ಲಿ ಸಮಸ್ಯೆ ಮುಗಿಯಿತು ಅನ್ನುವ ರೀತಿಯಲ್ಲಿ ಜನಪರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಜಾತಿ,ಮತ, ಪಕ್ಷ ಮೀರಿ ಬೆಳೆದು ನಿಂತಿದ್ದರು. ಬದ್ರಿಯಾ ಜುಮಾ ಮಸೀದಿ ಬಿತ್ತುಪಾದೆ ಯಲ್ಲಿ ಸುದೀರ್ಘ ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.