ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ
ದಿನಾಂಕ 10.05.2022 ರಂದು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ನಂದರ ಬೆಟ್ಟು ಎಂಬಲ್ಲಿ ಬಾಳಪ್ಪ ನಾಯ್ಕ ಮತ್ತು ಐತ್ತಪ್ಪ ನಾಯ್ಕ ರವರಿಗೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ಐತ್ತಪ್ಪ ನಾಯ್ಕನು ತನ್ನ ತಮ್ಮನಾದ ಬಾಳಪ್ಪ ನಾಯ್ಕನ ತಲೆಗೆ ಹಾಗೂ ಇತರ ಭಾಗಗಳಿಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆಗೈದು ಪರಾರಿಯಾಗಿದ್ದ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ 73/2022 ಕಲಾಂ 302ರಂತೆ ಪ್ರಕರಣ ದಾಖಲಾಗಿತ್ತು. ವಿಟ್ಲ ಠಾಣೆಯ ಇನ್ಸ್ಪೆಕ್ಟರ್ ನಾಗರಾಜ್ ಹೆಚ್ ಇ. ಅವರು ಸೂಕ್ತ ತನಿಖೆಯನ್ನು ನಡೆಸಿ, ಆರೋಪಿ ಐತ್ತಪ್ಪ ನಾಯ್ಕನನ್ನು ಬಂಧಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಮಾನ್ಯ ನ್ಯಾಯಾಲಯಕ್ಕೆ ಆರೋಪಿತರ ವಿರುದ್ದ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ತನಿಖಾ ನಡೆಸಿದ ಮಾನ್ಯ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸುವಲ್ಲಿ ತನಿಖಾ ಸಿಬ್ಬಂಧಿಯವರು ಶ್ರಮವಹಿಸಿ ಸಾಕ್ಷಿದಾರರನ್ನು ಸೂಕ್ತ ಸಮಯಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣವನ್ನು ಶಿಕ್ಷೆಯಾಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಮಾನ್ಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇದರ ನ್ಯಾಯಾಧೀಶರು ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿರುತ್ತಾರೆ. ಸರಕಾರಿ ಅಭಿಯೋಜಕರಾದ ಶ್ರೀ ಹರಿಶ್ಚಂದ್ರ ಉದ್ಯಾವರರವರು ಸದ್ರಿ ಪ್ರಕರಣದ ಬಗ್ಗೆ ವಾದವನ್ನು ಮಂಡಿಸಿರುತ್ತಾರೆ.
