ರೈಸ್ ಪುಲ್ಲಿಂಗ್ ಚೆಂಬು ತೋರಿಸಿ ಉದ್ಯಮಿಗೆ ಎಕರೆಗಟ್ಟಲೇ ಜಮೀನು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು 6 .58 ಎಕರೆ ಜಮೀನು ಬರೆಸಿಕೊಂಡು ಬೋರ್ ವೆಲ್ ಉದ್ಯಮಿ ಕಾಂತರಾಜು ಎಂಬವರಿಗೆ ವಂಚಸಿದ್ದಾರೆ. ನಾಗರತ್ನ, ರಾಮಚಂದ್ರ, ಸುಕುಮಾರ್ ಹಾಗೂ ನಟೇಶ್ ಎಂಬುವವರಿಂದ ವಂಚನೆ ವಂಚನೆ ಸಂಬಂಧ ಸಿಸಿಬಿಯಲ್ಲಿ ಉದ್ಯಮಿ ಕಾಂತರಾಜು ದೂರು ದಾಖಲಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಉದ್ಯಮಿ ಕಾಂತರಾಜುರವರನ್ನು ನಂಬಿಸಿದ ಆರೋಪಿಗಳು ಹಂತ ಹಂತವಾಗಿ ಜಮೀನು ಬರೆಸಿಕೊಂಡಿರುತ್ತಾರೆ. ಉದ್ಯಮಿ ಕಾಂತರಾಜು ಅಂಡರ್ ವಾಟರ್ ಹಾಗೂ ಕ್ರೂಡಾಯಿಲ್ ಪತ್ತೆ ಹಚ್ಚುವುದರಲ್ಲಿ ಪರಿಣಿತಿ ಹೊಂದಿದ್ದು, ರಾಜ್ಯಪಾಲರಿಂದ ವಿಶಲ್ ಮ್ಯಾನ್ ಅವಾರ್ಡ್ ಪಡಕೊಂಡಿರುತ್ತಾರೆ. ಕಾಂತರಾಜುರವರಿಗೆ ಸ್ವಂತದೊಂದು ಕ್ರೂಡ್ ಆಯಿಲ್ ಹಾಗೂ ರಿಪೈನರಿ ಪ್ಲಾಂಟ್ ತೆರೆಯಬೇಕೆಂಬ ಆಸೆಯಿತ್ತು ಇದರ ಅನುಮತಿಗಾಗಿ ಓಡಾಡುತ್ತಿದ್ದ ಅವರಿಗೆ ಲೈಸನ್ಸ್ ಸಿಕ್ಕಿರಲಿಲ್ಲ ಲೈಸನ್ಸ್ ಗಾಗಿ ಓಡಾಡುತ್ತಿದ್ದ ವೇಳೆ ಪರಿಚಯವಾಗಿತ್ತು. ಈ ಪೈಕಿ ನಾಗರತ್ನ ನಂದು ಸಹ ಪೆಟ್ರೋಲ್ ಬಂಕ್ ಇದ್ದು ನಿಮಗೆ ಪ್ಲಾಂಟ್ ತೆರೆಯಲು ಅನುಮತಿ ಕೊಡಿಸುತ್ತೇನೆ ಅದಕ್ಕೆ ಕೋಟ್ಯಾಂತರ ರೂಪಾಯಿ ಹಣಬೇಕು ಅದನ್ನು ನಾವು ನಿಮಗೆ ಕೊಡುತ್ತೇವೆ ಆದ್ರೆ ಸದ್ಯ ನಮ್ಮ ಬಳಿ ಹಣವಿಲ್ಲ ನಮ್ಮ ಬಳಿ ಐದು ರೈಸ್ ಪುಲ್ಲಿಂಗ್ ಚೆಂಬುಗಳಿದ್ದು ಅದು ಸ್ಯಾಟಲೈಟ್ ನೊಂದಿಗೆ ಸಂಪರ್ಕ ಹೊಂದುತ್ತವೆ ಆ ರೈಸ್ ಪುಲ್ಲಿಂಗ್ ಚೊಂಬುಗಳು ಆಲ್ಪಾ, ಬೀಟಾ, ಗಾಮಾ ರೇಖೆಗಳೊಂದಿಗೆ ಸಂಪರ್ಕ ಹೊಂದುತ್ತವೆ ಎಂದು ನಂಬಿಸಿ ಪರೀಕ್ಷೆ ಮಾಡಿ ತೋರಿಸಿ ನಂಬುವಂತೆ ಮಾಡಿದ್ದರು.

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗಳಿಗೆ ಕರೆಸಿ, ಸೆಟಪ್ ಮಾಡಿ ಬಿಲ್ಡಪ್ ಕೊಟ್ಟು ನಂಬಿಸಿ, ರೈಸ್ ಪುಲ್ಲಿಂಗ್ ಚೆಂಬುಗಳನ್ನು ಮಾರಿದರೆ 5 ಲಕ್ಷ ಕೋಟಿ ಬರುತ್ತದೆ ಅದನ್ನ ಮಾರಿದ ದುಡ್ಡಲ್ಲಿ ನಿಮಗೆ ಪ್ಲಾಂಟ್ ಜೊತೆಗೆ ಅನುಮತಿ ಕೊಡಿಸುತ್ತೇವೆ ಎಂದಿದ್ದರು. ಇದನ್ನು ನಂಬಿ ಕಾಂತರಾಜು ನೆಲಮಂಗಲದಲ್ಲಿರುವ 2 ಎಕರೆ 4 ಗುಂಟೆ ಜಮೀನು, ಥಣಿಸಂದ್ರದ 30X40 ಸೈಟ್, ಕನಕಪುರದ 4.18 ಎಕರೆ ಜಮೀನು ಬರೆಸಿಕೊಟ್ಟಿದ್ದರು. ವರ್ಷನುಗಟ್ಟಲೇ ಕಳೆದರು ಜಮೀನು ವಾಪಸ್ ಕೊಡದೇ ಅನುಮತಿಯೂ ಕೊಡಿಸದೆ ಸತಾಯಿಸಿದ್ದರು. ನಂತರ ವಂಚನೆಗೊಳಗಾದ ಕುರಿತು ತಿಳಿದು ಬೆಂದಳೂರು ಸಿಸಿಬಿಯಲ್ಲಿ ದೂರು ದಾಖಲಿಸಿ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
