ಶನಿವಾರದಂದು ಉಳ್ಳಾಲದ ಆಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ ಮೃತಪಟ್ಟ ಪ್ರಕರಣ ಇದೀಗ ಹಲವು ತಿರುವುಗಳನ್ನು ಪಡೆಯುತ್ತಿದ್ದು ವೈದ್ಯರ ಎಡವಟ್ಟಿನಿಂದಾಗಿ ಮೃತಪಟ್ಟಿರುವುದಾಗಿ ಗಂಭೀರ ಆರೋಪ ಕೇಳಿ ಬರುತ್ತಿದೆ.
ಕಂಕನಾಡಿ ಬೆಂದೂರ್ ವೆಲ್ ನಲ್ಲಿರುವ ಪ್ಲಾಂಟ್ ಕ್ಲಿನಿಕ್ ಗೆ ಕಾಸ್ಮೆಟಿಕ್ ಸರ್ಜರಿ ಗೆ ಬಂದಿದ್ದ ಮುಹಮ್ಮದ್ ಮಾಝಿನ್ ಗೆ ವೈದ್ಯರು ನೀಡಿದ ಅನಶೇಷಿಯಾ ಜೀವ ತೆಗೆದುಬಿಟ್ಟಿದೆ ಅನ್ನಲಾಗುತ್ತಿದೆ.

ತನ್ನ ತಾಯಿ, ಪತ್ನಿ ಯೊಂದಿಗೆ ಕ್ಲಿನಿಕ್ ಗೆ ಬಂದಿದ್ದ ಮುಹಮ್ಮದ್ ಮಾಝಿನ್ ತನ್ನ ಎದೆಯ ಭಾಗದ ಸಣ್ಣ ಗುಳ್ಳೆಯನ್ನು ತೆಗೆಯಲು ವೈದ್ಯರ ಸಲಹೆಯಂತೆ ತೆರಳಿದ್ದ. ಆರ್ಧ ಗಂಟೆಯಲ್ಲಿ ಮುಗಿಯಬೇಕಿದ್ದ ಸರ್ಜರಿ ಎರಡು ಗಂಟೆಯಾದರೂ ಮುಗಿಯದ ಕಾರಣ ಸಂಶಯಗೊಂಡ ಮಾಝಿನ್ ತಾಯಿ, ಪತ್ನಿ ವೈದ್ಯರಲ್ಲಿ ವಿಚಾರಿಸಿದಾಗ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ತುರ್ತು ಚಿಕಿತ್ಸೆಗೆ ಪ್ಲಾಂಟ್ ಕ್ಲಿನಿಕ್ ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಕೋಡಿಯಾಲ್ ಬೈಲ್ ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟೊತ್ತಿಗೆ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಪ್ಲಾಂಟ್ ಕ್ಲಿನಿಕ್ ವೈದ್ಯರು ಸರ್ಜರಿ ಮುನ್ನ ನೀಡಿದ ಅನಶೇಷಿಯಾ ಮಾಝಿನ್ ಜೀವವನ್ನು ಕಸಿದಿದೆ. ಎರಡು ವರ್ಷಗಳ ಹಿಂದೆಯಷ್ಟೇ ಮಾಝಿನ್ ವಿವಾಹವಾಗಿದ್ದರು. ವೈದ್ಯರ ಎಡವಟ್ಟು ಬಗ್ಗೆ ಶಮನ್ ಇಬ್ರಾಹಿಂ ನೀಡಿದ ದೂರಿನಂತೆ ಕದ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
