ನವರಾತ್ರಿ ವೇಷಧಾರಿ ಸುಂದರ ನಾಯ್ಕ ನಿಗೂಢ ನಾಪತ್ತೆ. ಪತ್ನಿಯಿಂದ ವಿಟ್ಲ ಠಾಣೆಯಲ್ಲಿ ದೂರು ದಾಖಲು.

ಕರಾವಳಿ

ನವರಾತ್ರಿ ವೇಷಧಾರಿ ವಿಟ್ಲ ಕಸಬಾ ಗ್ರಾಮದ ಪಳಿಕೆ ಅನ್ನಮೂಲೆ ನಿವಾಸಿ ಸುಂದರ ನಾಯ್ಕ(55) ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಹಲವು ವರ್ಷಗಳಿಂದ ಪ್ರತೀ ವರ್ಷ ವೇಷ ಹಾಕುತ್ತಿದ್ದ ಸುಂದರ ನಾಯ್ಕ ಈ ಬಾರಿಯೂ ವೇಷ ಹಾಕಲು ತಯಾರಿ ನಡೆಸಿದ್ದರು.

ಇದೇ ತಿಂಗಳ ಒಂದರಂದು ಪೊಲೀಸ್ ಠಾಣೆಗೆ ಹೋಗಿ ಅನುಮತಿ ಪಡೆಯುತ್ತೇನೆ ಎಂದು ಪತ್ನಿಯಲ್ಲಿ ಹೇಳಿ ಮನೆಯಿಂದ ಹೊರಟಿದ್ದ ಸುಂದರ ನಾಯ್ಕ ನವರಾತ್ರಿ ಹಬ್ಬ ಮುಗಿದರೂ ಮರಳಿ ಬಂದಿಲ್ಲ. ಆತಂಕಗೊಂಡ ಪತ್ನಿ ತನ್ನ ಸಂಬಂಧಿಕರಲ್ಲೆಲ್ಲಾ ವಿಚಾರಿಸಿದ್ದಾರೂ ಯಾವುದೇ ಮಾಹಿತಿ ಇಲ್ಲಿದ ಕಾರಣ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.