ಉಡುಪಿ: ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಪುತ್ರನ ಥಾರ್ ಜೀಪ್ ಓವರ್ ಸ್ಪೀಡಿಗೆ ರಿಕ್ಷಾ ಚಾಲಕ ದುರ್ಮರಣ

ಕರಾವಳಿ

ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ದೇವಿಪ್ರಸಾದ್ ಶೆಟ್ಟಿ ಪುತ್ರ ಪ್ರಜ್ವಲ್ ಶೆಟ್ಟಿ ಚಲಾಯಿಸುತ್ತಿದ್ದ ಐಷಾರಾಮಿ ಥಾರ್ ಜೀಪ್ ಓವರ್ ಸ್ಪೀಡ್ ಗೆ ರಿಕ್ಷಾ ಚಾಲಕನೊಬ್ಬ ಮೃತಪಟ್ಟ ಘಟನೆ ಉಡುಪಿ ಶಿರ್ವ ಬೆಳಪು ಮಿಲಿಟ್ರಿ ಕಾಲೋನಿಯಲ್ಲಿ ನಡೆದಿದೆ.

ಕಾಪು ತಾಲೂಕಿನ ಬೆಳಪು ಮಿಲಿಟ್ರಿ ಕಾಲೋನಿಯಲ್ಲಿ ನಡೆದ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಜ್ವಲ್ ಶೆಟ್ಟಿ ಯನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಬೆಳಗಿನ ಜಾವ ಬೈಕಿನಲ್ಲಿ ಹೋಗುತ್ತಿದ್ದ ಬೆಳಪು ನಿವಾಸಿ ಮುಹಮ್ಮದ್ ಹುಸೈನ್ ಮೃತ ದುರ್ದೈವಿ.

ಶಿರ್ವ ಪೊಲೀಸರು ಹಿಟ್ ಆಂಡ್ ರನ್ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.