ಕರ್ನಾಟಕದ ಮಾಜಿ ಸಿ.ಎಂ ಎಸ್ ಎಂ ಕೃಷ್ಣ ಇನ್ನಿಲ್ಲ

ರಾಜ್ಯ

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಂಗಳವಾರ ಮುಂಜಾನೆ ಅವರ ನಿವಾಸದಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ.

92 ವರ್ಷದ ಹಿರಿಯ ರಾಜಕಾರಣಿ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರು ಮುಂಜಾನೆ 2:45 ಕ್ಕೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಪಾರ್ಥಿವ ಶರೀರವನ್ನು ಇಂದು ಮದ್ದೂರಿಗೆ ಕೊಂಡೊಯ್ಯುವ ಸಾಧ್ಯತೆಯಿದೆ” ಎಂದು ಮೂಲಗಳು ತಿಳಿಸಿವೆ.