ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಿಗೆ ಅಶ್ಲೀಲ ಪದ ಬಳಕೆ ಮಾಡಿದ ಕಾರಣಕ್ಕಾಗಿ ಬಂಧನಕ್ಕೊಳಪಡಿಸಲಾಗಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ ಕ್ಕೆ ಕಾರಣವಾಗಿತ್ತು. ಸಿ ಟಿ ರವಿ ಅವರನ್ನು ಬಂಧಿಸಿ ಖಾನಾಪುರ ಠಾಣೆಗೆ ಕರೆತಂದ ಇನ್ಸ್ ಪೆಕ್ಟರ್ ಮಂಜುನಾಥ ನಾಯ್ಕ ಕರ್ತವ್ಯ ಲೋಪ, ಬೇಜಬ್ದಾರಿತನ ಪ್ರದರ್ಶನ ಆರೋಪ ಹಾಗೂ ಅಪಾಧಿತರನ್ನು ಹೊರತುಪಡಿಸಿ ಠಾಣೆಯೊಳಗೆ ಯಾರನ್ನೂ ಬಿಡದಂತೆ ಆದೇಶ ನೀಡಿದ್ದರೂ ನಿರ್ಲಕ್ಷ್ಯ ವಹಿಸಿ ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿರುವ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಈ ಬಗ್ಗೆ ಐಜಿಪಿ ವಿಕಾಸಕುಮಾರ ವಿಕಾಸ ಆದೇಶ ಹೊರಡಿಸಿದ್ದಾರೆ.
ರವಿ ಅವರನ್ನು ಬಂಧಿಸಿ ತಡರಾತ್ರಿ ಖಾನಾಪುರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಠಾಣೆಯ ಹೊರಗಡೆ ಗಲಾಟೆ ಮಾಡಿದ ಬಿಜೆಪಿ ನಾಯಕರನ್ನು ಸಿಪಿಐ ಮಂಜುನಾಥ ಠಾಣೆಯೊಳಗೆ ಬಿಟ್ಟಿದ್ದರು. ಇದಾದ ಬಳಿಕ ಠಾಣೆಯಲ್ಲಿ ಬಿಜೆಪಿ ನಾಯಕರು ಸಭೆ ಮಾಡಿದ್ದರು
ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ ಜಗದೀಶ ಅವರೂ ಅರ್ಧಗಂಟೆ ಚರ್ಚೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗರಂ ಆಗಿರುವ ಗೃಹಸಚಿವ ಪರಮೇಶ್ವರ ಅವರು ಪೊಲೀಸರಿಗೆ ತರಾಟೆ ತೆಗೆದುಕೊಂಡಿದ್ದರು. ಐಜಿಪಿ ವಿಕಾಸಕುಮಾರ ವಿಕಾಸ ಅವರು ಸಿಪಿಐ ಮಂಜುನಾಥ ನಾಯಕ ಅವರನ್ನುಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.