ಆಪೆ ಗೂಡ್ಸ್ ಚಾಲಕನ ಹುಚ್ಚಾಟ.ಆಪೆ ಚಾಲಕನ ಬದುಕಿಸಲು ಹೋಗಿ ಅಪಘಾತಕ್ಕೀಡಾದ ಬಸ್..

ಕರಾವಳಿ

ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಇಳಿಜಾರು ರಸ್ತೆಯಲ್ಲಿ ಭೀಕರ ಆಕ್ಸಿಡೆಂಟ್ ನಡೆದಿದೆ. ವಿಟ್ಲದ ಕಡೆಗೆ ಹೋಗುತ್ತಿದ್ದ ಗೂಡ್ಸ್ ಆಪೆ ರಿಕ್ಷಾ ಚಾಲಕ ತೀರಾ ನಿರ್ಲಕ್ಷ್ಯದಿಂದ ಚಲಾಯಿಸಿದ ಕಾರಣ ವಿಟ್ಲದಿಂದ ಮುಡಿಪು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುವ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆಯಲು ಮುಂದಾಗಿದೆ.

ಅಪಘಾತದ ಮುನ್ಸೂಚನೆ ಅರಿತ ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಗೂಡ್ಸ್ ಆಪೆ ಚಾಲಕನ ಪ್ರಾಣ ಉಳಿಯುವಂತಾಗಿದೆ.
ಬಸ್ಸಿಗೆ ಡಿಕ್ಕಿ ಹೊಡೆಯಲು ಶರವೇಗದಲ್ಲಿ ಬಂದ ಆಪೆ ಗೂಡ್ಸ್ ವಾಹನವನ್ನು ತಪ್ಪಿಸುವ ಭರದಲ್ಲಿ ಬಸ್ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದಿದ್ದರೂ ಬಸ್ ಪ್ರಯಾಣಿಕರು ಯಾವುದೇ ಗಾಯಗಳಾಗದೇ ಬಚಾವಾಗಿದ್ದಾರೆ. ಅದೇ ಸಂದರ್ಭ ಗೂಡ್ಸ್ ವಾಹನದ ಬಾಡಿ ಕಳಚಿಕೊಂಡು ರಸ್ತೆ ಬಿದ್ದಿದೆ. ಇಂಜಿನ್ ಜೊತೆಗೆ ಚಾಲಕ ಬೇರ್ಪಟ್ಟಿದ್ದರೂ ಸಣ್ಣಪುಟ್ಟ ಗಾಯಗಳಾಗಿ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿ ಬಸ್ ಪ್ರಯಾಣಿಕರು ವಿವರವಾಗಿ ಹೇಳಿಕೆ ನೀಡಿದ್ದಾರೆ.