ವೃತ್ತಿಪರ ಕೋರ್ಸ್ ನ 115 ವಿದ್ಯಾರ್ಥಿಗಳಿಗೆ ಕಮ್ಯೂನಿಟಿ ಸೆಂಟರ್ ನಲ್ಲಿ ವಿದ್ಯಾರ್ಥಿ ವೇತನ ವಿತರಣೆ……
ಇಂದು ನಡೆದ ಸರಳ ಸಮಾರಂಭದಲ್ಲಿ ಕಮ್ಯೂನಿಟಿ ಸೆಂಟರ್ ಮೂಲಕ ವಿವಿಧ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್ ಮತ್ತು ಪದವಿ ಶಿಕ್ಷಣ ಪಡೆಯುತ್ತಿರುವ 115 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. 82 ವಿದ್ಯಾರ್ಥಿಗಳಿಗೆ ವೈಟ್ ಸ್ಟೋನ್ ಮಾಲಕರಾದ ಬಿ.ಎಂ ಶರೀಫ್ ಜೋಕಟ್ಟೆ ಅವರು ವಿದ್ಯಾರ್ಥಿ ವೇತನ ನೀಡಿದರೆ, ಉಳಿದ 33 ವಿದ್ಯಾರ್ಥಿಗಳಿಗೆ ಪುತ್ತೂರು ಕಮ್ಯೂನಿಟಿ ಸೆಂಟರಿನ ಸ್ಥಾಪಕ ಸದಸ್ಯ ಉದ್ಯಮಿ ಅಬ್ದುಲ್ ಸತ್ತಾರ್ ರವರು ನೀಡಿದರು.
ಕಮ್ಯೂನಿಟಿ ಸೆಂಟರ್ ಮೂಲಕ 582 ವಿದ್ಯಾರ್ಥಿಗಳು ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು. 2024 – 25 ಸಾಲಿನಲ್ಲಿ ಈಗಾಗಲೇ 468 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಂತ ಹಂತವಾಗಿ ನೀಡಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಟೀಂ ಬಿ. ಹ್ಯೂಮನ್ ನ ಸ್ಥಾಪಕರಾದ ಆಸಿಫ್ ಡೀಲ್ಸ್ ರವರು, ಕಮ್ಯೂನಿಟಿ ಸೆಂಟರ್ ಬಹಳ ಯಶಸ್ವಿಯಾಗಿ ಮುನ್ನಡೆಯಲು ಅದರ ರಚನಾತ್ಮಕ ಯೋಜನೆಗಳು ಮುಖ್ಯ ಕಾರಣ, ಅವರು ವಿದ್ಯಾರ್ಥಿಗಳ ದಾಖಲೆ ಮತ್ತು ವೆರಿಫಿಕೇಶನ್ ಬಹಳ ಅಚ್ಚುಕಟ್ಟಾಗಿ ಮಾಡುತ್ತಾರೆ. ಅರ್ಹ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಿದ ಸೆಂಟರ್ ವಿದ್ಯಾರ್ಥಿಗಳನ್ನು ಸಾಮಾಜಿಕ ನಾಯಕತ್ವಕ್ಕೆ ತಯಾರುಗೊಳಿಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಇಂತಹ ಸಂಸ್ಥೆಯ ಜೊತೆ ಬೆನ್ನೆಲುಬಾಗಿ ನಿಂತಿರುವ ನಮ್ಮ ಟೀಂ ಬೀ ಹ್ಯೂಮನ್ ನ ಟ್ರಸ್ಟಿಯಾದಂತಹ ಜನಾಬ್ ಬಿ.ಎಂ ಶರೀಫ್ ರ ಕಾಳಜಿ ಮತ್ತು ಕೊಡುಗೆಯನ್ನು ಕೃತಜ್ಞತಾ ಪೂರ್ವಕ ಸ್ಮರಿಸುತ್ತೇವೆ. ಅವರ ಮಗ ಶೋಹೈಬ್ ರನ್ನು ಇವತ್ತು ಈ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿರುವುದು ಕಮ್ಯೂನಿಟಿ ಸೆಂಟರ್ ನ ಸಾಮಾಜಿಕ ಚಟುವಟಿಕೆಯಲ್ಲಿ ಯುವ ಉದ್ಯಮಿಗಳ ಭಾಗವಹಿಸುವಿಕೆಗೆ ಕಾರಣವಾಗಲಿದೆ ಎಂದು ಆಸಿಫ್ ಡೀಲ್ಸ್ ಹೇಳಿದರು.
ಶೋಹೈಬ್ ವೈಟ್ ಸ್ಟೋನ್ ರವರು ಮಾತನಾಡಿ, ನನ್ನ ತಂದೆಯವರು ಈ ಸೆಂಟರಿನ ಕಾರ್ಯಕ್ರಮಗಳ ಬಗ್ಗೆ ಬಹಳ ವಿಶ್ವಾಸ ಹೊಂದಿದ್ದಾರೆ. ಅವರು ನಮಗೆ ಸಾಮಾಜಿಕ ಜೀವನದಲ್ಲಿ ಸೇವಾಗುಣವನ್ನು ಕಲಿಸಲು ಸಮುದಾಯದ ಪ್ರಗತಿಯ ಪ್ರಯತ್ನದಲ್ಲಿ ಸೇರಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಸೇವಾ ಪರಂಪರೆಯನ್ನು ನಾವು ಕಂಡಿತಾ ಮುಂದೆ ಕೊಂಡು ಹೋಗಲಿದ್ದೇವೆ. ಅದಕ್ಕಾಗಿ ಉತ್ತಮ ಯೋಜನೆಯ ಜೊತೆ ನಾವಿದ್ದೇವೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಟೀಮ್ ಬೀ ಹ್ಯೂಮನ್ ನ ಟ್ರಸ್ಟಿ ಜನಾಬ್ ಬೀ.ಎಂ ಶರೀಫ್ ಹಾಜಿ, ಎನ್.ಆರ್.ಐ ಸಂಯೋಜಕರಾದ ಇಮ್ರಾನ್ ಹಸನ್, ನವಾಜ್ ವೈಟ್ ಸ್ಟೋನ್, ಇಕ್ಬಾಲ್ ಬಂಟ್ವಾಳ, ರಹಿಮಾನ್, ಅಲ್ತಾಫ್ , ಕಮ್ಯೂನಿಟಿ ಸೆಂಟರಿನ ಇಮ್ತಿಯಾಜ್, ನಜೀರ್ ಭಾಗವಹಿಸಿದ್ದರು.
