ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ 15 ಪ್ರಮುಖ ಮೂಲಭೂತ ಸೌಕರ್ಯಗಳನ್ನು ಗುರುತಿಸಿ ಸರ್ಕಾರದ ಅಧಿಕೃತ ಸುತ್ತೋಲೆ

ರಾಜ್ಯ

ದೈನಂದಿನ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ

ರಾಜ್ಯದ ಗ್ರಾಮೀಣ ಭಾಗದ ಜನರ ಜೀವನಮಟ್ಟವನ್ನು ಸುಧಾರಿಸಲು ಮತ್ತು ನಗರ ಪ್ರದೇಶದ ಮಾದರಿಯಲ್ಲೇ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಒದಗಿಸಬೇಕಾದ 15 ಪ್ರಮುಖ ಮೂಲಭೂತ ಸೌಕರ್ಯಗಳನ್ನು ಗುರುತಿಸಿ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 61.43 ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಅವರಿಗೆ ದೈನಂದಿನ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗ್ರಾಮಗಳಲ್ಲಿ ಜಾರಿಯಾಗಲಿರುವ 15 ಪ್ರಮುಖ ಸೌಲಭ್ಯಗಳು: ಶುದ್ಧ ಕುಡಿಯುವ ನೀರು: ಪ್ರತಿ ಕುಟುಂಬಕ್ಕೆ ದಿನಕ್ಕೆ ಕನಿಷ್ಠ 55 ಲೀಟರ್ ಶುದ್ಧ ನೀರು ಒದಗಿಸುವುದು ಮತ್ತು ಶೇ. 80 ರಷ್ಟು ಮನೆಗಳಿಗೆ ವೈಯಕ್ತಿಕ ನಳ ಸಂಪರ್ಕ ನೀಡುವುದು.
ವೈಯಕ್ತಿಕ ಶೌಚಾಲಯ: ‘ನಿರ್ಮಲ ಭಾರತ ಅಭಿಯಾನ’ದಡಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣ ಹಾಗೂ ಶಾಲೆ-ಅಂಗನವಾಡಿಗಳಲ್ಲಿ ನೈರ್ಮಲ್ಯ ಕಾಪಾಡುವುದು.
ರಸ್ತೆ ನಿರ್ಮಾಣ: ಕಚ್ಚಾ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸುಸಜ್ಜಿತ ಗ್ರಾಮೀಣ ರಸ್ತೆಗಳ ಜಾಲ ನಿರ್ಮಿಸುವುದು.
ಆಟದ ಮೈದಾನ: ಯುವಜನತೆ ಮತ್ತು ಮಕ್ಕಳ ದೈಹಿಕ ವಿಕಾಸಕ್ಕಾಗಿ ಪ್ರತಿ ಪಂಚಾಯಿತಿಯಲ್ಲಿ ಕನಿಷ್ಠ ಒಂದು ಸುಸಜ್ಜಿತ ಆಟದ ಮೈದಾನ ನಿರ್ಮಾಣ.

ರುದ್ರಭೂಮಿ ಅಭಿವೃದ್ಧಿ: ಗ್ರಾಮಗಳ ಹೊರಭಾಗದಲ್ಲಿ ಘನವೆತ್ತ ಅಂತ್ಯಕ್ರಿಯೆ ನಡೆಸಲು ಅಗತ್ಯವಿರುವ ರುದ್ರಭೂಮಿ ಸೌಲಭ್ಯ ಒದಗಿಸುವುದು.

ದನದ ಕೊಟ್ಟಿಗೆಗಳ ನಿರ್ಮಾಣ: ಜಾನುವಾರುಗಳ ರಕ್ಷಣೆಗಾಗಿ ನರೇಗಾ ಯೋಜನೆಯಡಿ ಕುರಿ ಮತ್ತು ದನದ ದೊಡ್ಡಿಗಳ ನಿರ್ಮಾಣಕ್ಕೆ ಆದ್ಯತೆ.
ಧಾನ್ಯ ಒಕ್ಕಣೆ ಕಣ: ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗಲು ಸಮೂಹಿಕ ಧಾನ್ಯ ಒಕ್ಕಣೆ ಕಣಗಳ ನಿರ್ಮಾಣ.
ಬಯಲು ರಂಗಮಂದಿರ: ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಸಾಂಸ್ಕೃತಿಕ ವೇದಿಕೆಗಳ ನಿರ್ಮಾಣ.

ನಾಗರಿಕ ಸೇವಾ ಕೇಂದ್ರಗಳು: ಸರ್ಕಾರದ ದಾಖಲೆಗಳು ಮತ್ತು ಯೋಜನೆಗಳ ಮಾಹಿತಿ ಗ್ರಾಮ ಮಟ್ಟದಲ್ಲೇ ಸಿಗುವಂತೆ ಸೇವಾ ಕೇಂದ್ರಗಳ ಸ್ಥಾಪನೆ.
ಕೌಶಲ್ಯಾಭಿವೃದ್ಧಿ ತರಬೇತಿ:
ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ವಿಶೇಷ ತರಬೇತಿ ನೀಡಿಕೆ.
ನಮ್ಮ ಹಳ್ಳಿ-ನಮ್ಮ ನೀರು‘: ಕೆರೆ-ಕಟ್ಟೆಗಳ ಪುನರುಜ್ಜೀವನ ಮತ್ತು ಅಂತರ್ಜಲ ವೃದ್ಧಿಗೆ ಜಲ ಮರುಪೂರಣ ಯೋಜನೆಗಳ ಅನುಷ್ಠಾನ. ಹೀಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಒದಗಿಸಬೇಕಾದ 15 ಪ್ರಮುಖ ಮೂಲಭೂತ ಸೌಕರ್ಯಗಳನ್ನು ಗುರುತಿಸಿ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ.