ಕರಾವಳಿಯಲ್ಲಿ UPSC ಪರೀಕ್ಷೆಯ ಸಾಧನೆಗೆ ಮುನ್ನುಡಿ ಬರೆದ ACE IAS ಅಕಾಡಮಿ

ಕರಾವಳಿ

✍️. ಹನೀಫ್ ಪುತ್ತೂರು

ಹಲವಾರು ವರ್ಷದ ಕನಸು ನಿರಂತರ ಪರಿಶ್ರಮ ಮೂಲಕ ನನಸಾಗಿದೆ. Ace IAS academy ಇದುವರೆಗೂ ಹಲವಾರು ಸರಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಳುಹಿಸಿದೆ. ಪೊಲೀಸ್ ಇಲಾಖೆ, ಇನ್ ಕಂ ಟ್ಯಾಕ್ಸ್, PWD, ಸರಕಾರಿ ಇಲಾಕೆಗಳಾದ ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹೀಗೆ ಹಲವಾರು ಇಲಾಖೆಯಲ್ಲಿ ಸಂಸ್ಥೆಯಲ್ಲಿ ಕೋಚಿಂಗ್ ಪಡೆದ ಅಭ್ಯರ್ಥಿಗಳು ಅಧಿಕಾರಿಗಳಾಗಿ, ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಎಲ್ಲಾ ವರ್ಗದ ಅಭ್ಯರ್ಥಿಗಳು ಈ ಸಂಸ್ಥೆಯ ಪ್ರಯೋಜನ ಪಡೆದಿದ್ದಾರೆ.

ಇದೆ ಮೊದಲ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಬಸಾಲಿಯಾ ಖಾನ್ ಆಯ್ಕೆಯಾಗುವ ಮೂಲಕ ACE IAS ಅಕಾಡಮಿ ತನ್ನ ಸ್ಪರ್ಧಾತ್ಮಕ ಪರೀಕ್ಷೆಯ ಸಾಧನೆಗೆ ಕಿರೀಟವನ್ನು ಇಟ್ಟಿದೆ. ಬುದ್ಧಿವಂತರು ಇರುವ ಕರಾವಳಿ ಜಿಲ್ಲೆಯಲ್ಲಿ ಬಿಲ್ಲವ, ಗೌಡ, ಬ್ರಾಹ್ಮಣ, ಕೊಂಕಣಿ, ಭಂಟ, ಬ್ಯಾರಿ ಹಾಗೂ ಹಿಂದುಳಿದ ಸಮುದಾಯ ಸರಕಾರಿ ಆಡಳಿತಾತ್ಮಕ ಹುದ್ದೆಯಲ್ಲಿ ಉನ್ನತ ಶ್ರೇಣಿಯ ಅಧಿಕಾರಿಗಳಾಗಿ ಕಾಣುವುದು ವಿರಳ. ವಿಶೇಷವಾಗಿ UPSC ಯಂತಹ ಪ್ರತಿಷ್ಠಿತ ಪರೀಕ್ಷೆಯಲ್ಲಿ IAS, IPS ಆಗುವುದನ್ನು ಕಾಣುವುದೇ ಅಪರೂಪ. ಉತ್ತರ ಭಾರತದ ಶೈಕ್ಷಣಿಕ ಹಿಂದುಳಿದ ರಾಜ್ಯವಾದ ಬಿಹಾರವು 27% ಹೆಚ್ಚು ಅಭ್ಯರ್ಥಿಗಳು UPSI ಗೆ ತನ್ನ ಕೊಡುಗೆ ಕೊಡುತ್ತಿದ್ದಾರೆ.

ಬುದ್ಧಿವಂತರ ನಾಡಾದ ನಮ್ಮದು ಈ ಅಂಕಿ ಅಂಶದಲ್ಲಿ ಕಾಣಲು ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ACE ಐಎಎಸ್ ಅಕಾಡಮಿಯ ಸಾದನೆ ನಮ್ಮ ಕರಾವಳಿಯ ವಿಧ್ಯಾರ್ಥಿಗಳಿಗೆ ಸ್ಫೂರ್ತಿ ಮತ್ತು ಪ್ರೇರಣೆ ಎನ್ನಬಹುದು. ಈ ಸಾಧನೆಯು ಭವಿಷ್ಯದ ವಿದ್ಯಾರ್ಥಿಗಳಲ್ಲಿ ಹೊಸ ಆಶಾಕಿರಣ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.