ಬೆಳ್ಳಂಬೆಳಗ್ಗೆ ಕಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್. ಪುತ್ತೂರು ಮುರ ಬಳಿ ಭೀಕರ ಅಪಘಾತ, ಮೂವರಿಗೆ ಗಂಭೀರ

ಕರಾವಳಿ

ಬೆಂಗಳೂರಿನಿಂದ ಪುತ್ತೂರು, ವಿಟ್ಲ, ಸಾಲೆತ್ತೂರು, ಮುಡಿಪು ಮಾರ್ಗ ಮೂಲಕ ಮಂಗಳೂರಿಗೆ ಬರುತ್ತಿದ್ದ ಮರ್ಸಿ ಹೆಸರಿನ ಖಾಸಗಿ ಬಸೊಂದು ಮುರ ಬಳಿ ಮುಂದುಗಡೆ ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಪುತ್ತೂರಿನಿಂದ ಕೆದಿಲ ಕಡೆಗೆ ಬರುತ್ತಿದ್ದ ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರು. ಬಸ್ ಡಿಕ್ಕಿ ಹೊಡೆದ ತೀವ್ರತೆಗೆ ಮೂವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ವಿವರ ತಿಳಿದು ಬಂದಿಲ್ಲ. ಅಪಘಾತದ ತೀವ್ರತೆಗೆ ಕಾರು ಗುರುತು ಹಿಡಿಯಲಾರದಷ್ಟು ಜಖಂಗೊಂಡಿದೆ.

ಮಾರ್ಸಿ ಬಸ್ ಚಾಲಕನ ಹುಚ್ಚಾಟವೇ ಅಪಘಾತಕ್ಕೆ ಕಾರಣ. ಮಿತಿ ಮೀರಿದ ವೇಗ, ಬೇಜವಾಬ್ದಾರಿ ಚಾಲನೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ.
ಚಾಲಕನ ಮೇಲೆ ಪ್ರಯಾಣಿಕರಿಂದ ಈ ಹಿಂದೆಯೂ ಮಾಲಿಕನಿಗೆ ಹಲವಾರು ಆರೋಪ, ದೂರು ನೀಡಿದರೂ ಕ್ರಮ ಕೈಗೊಳ್ಳದ ಬಸ್ ಮಾಲಕ.