ಗುರುಪುರ: ಖಾಸಗಿ ಬಸ್-ಬೈಕ್ ಅಪಘಾತ: ಓರ್ವ ಮೃತ್ಯು

ಕರಾವಳಿ

ಮೂಡಬಿದಿರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಜೀವನ್ ಹೆಸರಿನ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಗುರುಪುರದಲ್ಲಿ ನಡೆದಿದೆ.

ಕರಿಯಂಗಳದ ಸಂತೋಷ್ ಮೃತ ಯುವಕ. ಆತನಿಗೆ 38 ವರ್ಷ ವಯಸ್ಸಾಗಿತ್ತು. ವಾಮಂಜೂರು ವಿ.ಎಸ್. ಬ್ಯಾಂಕಿನ ಉದ್ಯೋಗಿಯಾಗಿದ್ದ. ಗುರುಪುರ ಬ್ಯಾಂಕ್ ಎದುರು ಘಟನೆ ನಡೆದಿದೆ.