ಸುಂದರ ಯುವತಿಯರನ್ನು ಬಳಸಿ ಹನಿಟ್ರ್ಯಾಪ್; ಪೊಲೀಸ್ ಪೇದೆ ಸಹಿತ ಐವರ ಬಂಧನ

ರಾಜ್ಯ

ಸುಂದರವಾದ ಸುರಂಗಿಣಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಹಣ ದೋಚುತ್ತಿದ್ದ ಪೊಲೀಸ್ ಪೇದೆ ಸೇರಿದಂತೆ ಐವರನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹನಿಟ್ರ್ಯಾಪ್ ಜಾಲದಲ್ಲಿ ಭಾಗಿಯಾಗಿದ್ದ ಸೂತ್ರದಾರಿ ಪಿರಿಯಾಪಟ್ಟಣ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಶಿವಣ್ಣಮೂರ್ತಿ ಸೇರಿಂದತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುರ ಸುಂದರವಾದ ಹುಡುಗಿಯರನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾಡಿ, ವಸೂಲಿಸಿ ಮಾಡುತ್ತಿದ್ದ ಗ್ಯಾಂಗ್ ಕಂಪಲಾಪುರದ ಬಟ್ಟೆ ವ್ಯಾಪಾರಿ ದಿನೇಶ್ ಕುಮಾರ್ ಅವರನ್ನು ಖೆಡ್ಡಾಗೆ ಕೆಡವಿ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ದೋಚಿದ್ದರು. ಯುವತಿಯೊಬ್ಬಳು ದಿನೇಶ್ ಅವರ ಬಟ್ಟೆ ಅಂಗಡಿಗೆ ತೆರಳಿ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಬಟ್ಟೆ ವ್ಯಾಪಾರಿ ದಿನೇಶ್ ಕುಮಾರ್ ರವರ ಮೊಬೇಲ್ ನಂಬರ್ ಪಡೆದು ವಾಟ್ಸಾಪ್ ಚಾಟಿಂಗ್ ಶುರು ಮಾಡಿದ್ದಳು. ಮನೆಯಲ್ಲಿ ಯಾರೂ ಇಲ್ಲ ಕಾಫಿಗೆ ಬನ್ನಿ ಎಂದು ಆಹ್ವಾನಿಸಿದ್ದಳು.

ಸುರಾಂಗಿಣಿ ಯುವತಿಯ ಮಾತಿಗೆ ಮರುಳಾದ ದಿನೇಶ್ ಕುಮಾರ್ ಸಿಕ್ಕ ಅವಕಾಶ ಪಡೆಯಲು ಆಕೆಯ ಮನೆಗೆ ಹೋಗಿದ್ದಾರೆ. ಯುವತಿ ಜೊತೆ ಮನೆಯಲ್ಲಿ ಬಟ್ಟೆ ವ್ಯಾಪಾರಿ ದಿನೇಶ್ ಇದ್ದ ಸಂದರ್ಭ ಕಾನ್ಸ್ ಟೇಬಲ್ ಶಿವಣ್ಣ ಹಾಗೂ ಮೂರ್ತಿ ಮನೆಗೆ ನುಗ್ಗಿದ್ದಾರೆ. ದಿನೇಶ್ ಕುಮಾರ್ ಗೆ ಹಿಗ್ಗಾಮುಗ್ಗಾ ಥಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಹೊರಗೆ ಹೇಳಬಾರದು ಎಂದರೆ 10 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಹೆದರಿಸಿದ್ದಾರೆ.

ಮರ್ಯಾದೆ ಹೋಗುತ್ತೆ ಎಂಬುದು ಗೊತ್ತಾಗಿ ಸಹೋದರನಿಗೆ ಹೇಳಿ ಹತ್ತು ಲಕ್ಷ ರೂಪಾಯಿ ಹಣ ತರಿಸಿದ್ದರು. 10 ಲಕ್ಷ ರೂಪಾಯಿ ತರುವಂತೆ ದಿನೇಶ್ ಹೇಳಲು ಕಾರಣವೇನಿರಬಹುದು ಎಂದು ದಿನೇಶ್ ಸಹೋದರ ಅನುಮಾನಗೊಂಡಿದ್ದ. ಅಲ್ಲದೇ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಾನ್ಸ್ ಟೇಬಲ್ ಶಿವಣ್ಣ ಸೇರಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ಸಂಗತಿ ಹೊರಬಂದಿದೆ. ನಂತರ ಪ್ರಕರಣ ದಾಖಲಾಗಿದೆ.