ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಆರಂಭದ ಹಂತದಲ್ಲೇ ಸರಿಯಾದ ಶೈಕ್ಷಣಿಕ ಮಾರ್ಗದರ್ಶನ ಮತ್ತು ಉತ್ತೇಜನ ನೀಡುವ ಉದ್ದೇಶದಿಂದ ಇಂದು ವಿ.ಕೆ. ಒಬೇದುಲ್ಲಾ ಸ್ಕೂಲ್ ನಲ್ಲಿ ಹೆತ್ತವರ ಜೊತೆ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರ ನಡೆಯಿತು.
ವಿದ್ಯಾರ್ಥಿಗಳಲ್ಲಿ ಕಲಿಕೆಯ ಶಿಸ್ತು, ಕಲಿಕೆಯ ವಿಧಾನ ಮತ್ತು ಕಲಿಯ ಗುರಿಯ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು. ಹೆತ್ತವರು ತಮ್ಮ ಮಕ್ಕಳ ಕುರಿತ ಕಾಳಜಿ ಮತ್ತು ಪಾತ್ರಗಳನ್ನು ನಿರ್ವಹಿಸುವ ಬಗ್ಗೆಯೂ ಮನಮುಟ್ಟುವ ಹಿತವಚನ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಡಿಸಿಪಿ ಜಿ. ಎ. ಬಾವಾರವರು ವಿದ್ಯಾರ್ಥಿಗಳಿಗೆ ಕಲಿಕೆಗೆ ಸೂಕ್ತವಾದ ವಾತಾವರಣ, ಆಧುನಿಕ ಸೌಲಭ್ಯ, ಉನ್ನತ ವಿಧಾನಗಳನ್ನು ಹಾಗೂ ನುರಿತ ಅಧ್ಯಾಪಕರನ್ನು ನಿಯೋಜಿಸಲಾಗಿದೆ. ವಿ.ಕೆ. ಒಬೇದುಲ್ಲಾ ಕಾಲೇಜಿನ ಪಿಯುಸಿ ಫಲಿತಾಂಶ ತೃಪ್ತಿಕರವಾಗಿದ್ದು ಆದರೆ ಎಸ್.ಎಸ್.ಎಲ್.ಸಿ ಫಲಿತಾಂಶ ಅಷ್ಟು ತೃಪ್ತಿಕರವಾಗಿಲ್ಲ, ಈ ನಿಟ್ಟಿನಲ್ಲಿ ನಾವು ವಿದ್ಯಾರ್ಥಿಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಉತ್ತೇಜಿಸುವ ಮತ್ತು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.

ಎಲ್ಲಾ ಸೌಲಭ್ಯ ಮತ್ತು ಅವಕಾಶ ಇದ್ದು ಕಲಿಯಲು ನಿರ್ಲ್ಯಕ್ಷ ತೋರಿಸಿದರೆ ಅದಕ್ಕೆ ನಾವೇ ಹೊಣೆಯಾಗುತ್ತೇವೆ. ಇಂತಹ ಒಂದು ಸಾಮಾಜಿಕ ಉದ್ದೇಶದ ಶಿಕ್ಷಣ ಸಂಸ್ಥೆ ಬೆಂಗಳೂರಿನಲ್ಲಿ ಇಲ್ಲ. ಅಂತಾರಾಷ್ಟ್ರೀಯ ಮಟ್ಟದ ಸ್ಕೂಲ್ ನಲ್ಲಿ ಇಷ್ಟು ಫೆಸಿಲಿಟಿಸ್ ಇರುವುದಿಲ್ಲ. ಇಂತಹ ಶಾಲೆಯಲ್ಲಿ ನಿಮ್ಮ ಮಕ್ಕಳು ಕಲಿಯುವಾಗ ಅವರ ಮೇಲೆ ನಿಗಾ ಇರಿಸಿ ಅವರ ಉನ್ನತಿಗೆ ಶ್ರಮಿಸುವುದು ಹೆತ್ತವರ ಕರ್ತವ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಯುತ ಜಮೀರ್ ಖಾನ್ ಅವರು ಹಿತವಚನ ನುಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅವರ ಹೆತ್ತವರು, ಅಧ್ಯಾಪಕರು ಭಾಗವಹಿಸಿದ್ದರು.
