ಅಮಿತ್ ಶಾ ದೋಸ್ತ್ ಡಿಕೆಶಿ ಬಿಜೆಪಿ ಸೇರ್ತರಾ..? ರಾಜ್ಯ ರಾಜಕಾರಣದಲ್ಲಿ ಬಿಗ್ ಸಂಚಲನ.!

ರಾಜ್ಯ

ಎಸ್ ಎಂ ಕೃಷ್ಣ ಹಾದಿಯತ್ತ ಅವರ ಪಟ್ಟಾ ಶಿಷ್ಯ.!

ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಸ್ಪೋಟಕ ಸುದ್ದಿಯೊಂದು ಹೊರಬರುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಜೆಪಿ ಸೇರ್ತಾರೆ ಅನ್ನುವ ಸೆನ್ಸೇಷನಲ್ ಸುದ್ದಿ ಅದು. ಈ ಸುದ್ದಿ ಇಂದು ನಿನ್ನೆ ಹುಟ್ಟಿದ್ದಲ್ಲ. ಹಲವು ಸಮಯದಿಂದಲೂ ಇಂತಹದ್ದೊಂದು ಸುದ್ದಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ. ಆದರೆ ಈ ಬಾರಿಯಂತೂ ಪಕ್ಕಾ ಅನ್ನುವಷ್ಟರ ಮಟ್ಟಿಗೆ ಸುದ್ದಿ ರಿವೀಲ್ ಆಗುತ್ತಿದೆ. ಕಾಂಗ್ರೆಸ್ ಗೆ ಗುಡ್ ಬೈ ಹೇಳಲು ಡಿಕೆಶಿ ಮಾನಸಿಕವಾಗಿ ತಯಾರಿ ನಡೆಸುತ್ತಿದ್ದಾರೆ ಅನ್ನುವ ವರದಿಗಳು ಕೇಳಿ ಬರತೊಡಗಿದೆ.

ಕೆಲವು ತಿಂಗಳ ಹಿಂದೆ ಕೊಯಮತ್ತೂರಿನಲ್ಲಿ ನಡೆದ ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮದಲ್ಲಿ ಅಮಿತ್ ಶಾ ಜೊತೆಗೆ ಡಿಕೆಶಿ ವೇದಿಕೆ ಹಂಚಿಕೊಂಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಡಿಕೆಶಿ ಈ ನಡೆಗೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿತ್ತು. ಆದರೆ ಡಿಕೆಶಿ ನಿಗದಿತ ಸಮಯದೊಳಗೆ ಮುಖ್ಯಮಂತ್ರಿ ಹುದ್ದೆ ನೀಡದಿದ್ದರೆ ಬಿಜೆಪಿಗೆ ಹೋಗುವುದು ಗ್ಯಾರಂಟಿ ಅನ್ನುವ ಸಂದೇಶವನ್ನು ಈ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ರವಾನಿಸಿದ್ದರು.

ಗೃಹಮಂತ್ರಿ ಅಮಿತ್ ಶಾ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ ಪರಸ್ಪರ ದೋಸ್ತ್ ಗಳು ಅನ್ನುವುದು ರಾಜಕಾರಣ ಬಲ್ಲವರಿಗೆ ತಿಳಿದ ವಿಚಾರ. ರಾಜ್ಯದ ಬಿಜೆಪಿ ನಾಯಕರುಗಳಿಗೆ ಅಮಿತ್ ಶಾ ಭೇಟಿಗೆ ಸಿಗದಿದ್ದರೂ ಡಿಕೆಶಿ ಗೆ ಸುಲಭವಾಗಿ ಸಿಗುತ್ತಾರೆ. ಶಾ-ಡಿಕೆಶಿ ಮಧ್ಯೆ ಅಷ್ಟು ಅತ್ಯಾಪ್ತತೆ ಇದೆ.

ಸೆಪ್ಟೆಂಬರ್ ನಲ್ಲಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಬೇಕೆಂಬುದು ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಈ ಹಿಂದೆ ತೀರ್ಮಾನವಾದ ಸುದ್ದಿ. ಎರಡೂವರೆ ವರ್ಷ ಸಿದ್ದರಾಮಯ್ಯ ರಿಗೆ ಸಿಎಂ ಪಟ್ಟ, ಉಳಿದ ಎರಡೂವರೆ ವರ್ಷ ಡಿಕೆಶಿ ಗೆ ಸಿಎಂ ಪಟ್ಟ ಫಿಕ್ಸ್ ಎಂದು ತೀರ್ಮಾನವಾಗಿತ್ತಂತೆ. ಆದರೆ ಶಾಸಕರ ಬೆಂಬಲ ತನಗಿದೆ ಎಂದು ಸಿದ್ದರಾಮಯ್ಯ ಪಟ್ಟ ಬಿಟ್ಟುಕೊಡಲು ತಯಾರಿಲ್ಲ. ಕಾಂಗ್ರೆಸ್ ಪಕ್ಷ ಕಟ್ಟಲು ಶ್ರಮಿಸಿದ ತನಗೆ ಮುಖ್ಯಮಂತ್ರಿ ಪಟ್ಟ ಕನಸಿನ ಮಾತು ರೀತಿ ಆಗಿರುವುದರಿಂದ ಸಹಜವಾಗಿ ಡಿಕೆಶಿ ಮಾನಸಿಕವಾಗಿ ಗೊಂದಲಕ್ಕೆ ಸಿಲುಕಿದ್ದಾರೆ.

ಇತ್ತ ಇಡಿ, ಸಿಬಿಐ ತನಿಖೆಯಿಂದ ಡಿಕೆಶಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಬಿಐ ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದರೆ, ಇಡಿ ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿದೆ. ಇತ್ತ ಡಿಕೆಶಿ ಮಗಳು ‘ಕಾಂಗ್ರೆಸ್ ಬಿಟ್ಟು ಬಿಡು, ಬಿಜೆಪಿ ಗೆ ಹೋಗು, ಕೇಸು ಕ್ಲಿಯರ್ ಮಾಡು’ ಎಂದು ಹೇಳಿರುವುದು ವರದಿಯಾಗಿದೆ. ಇದೀಗ ಬಿಜೆಪಿಗೆ ಹೋದರೆ ಸೇಫ್ ಅನ್ನುವ ತೀರ್ಮಾನಕ್ಕೆ ಡಿಕೆಶಿ ಬಂದಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಮಾಸ್ ಲೀಡರ್ ಇಲ್ಲ. ಮೃದು ಹಿಂದುತ್ವವಾದಿ, ದೈವ ಭಕ್ತ ಡಿಕೆಶಿ ಬಿಜೆಪಿ ಜಾಯಿನ್ ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಂಪರ್ ಲಾಭವಾಗಬಹುದು. ಡಿಕೆಶಿ ಗುರು ಎಸ್ ಎಂ ಕೃಷ್ಣ ಕೂಡ ಸಂಧ್ಯಾಕಾಲದಲ್ಲಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ್ದರು. ಸಾವಿರಾರು ಕೋಟಿಯ ಒಡೆಯ, ವ್ಯಾವಹಾರಿಕ ರಾಜಕಾರಣಿ ಡಿಕೆಶಿ ತನ್ನ ವ್ಯವಹಾರವನ್ನು ವಿಸ್ತರಿಸಲು ಬಿಜೆಪಿ ಒಂದೇ ಸದ್ಯದ ಉತ್ತಮ ಆಯ್ಕೆ. ಕೇಂದ್ರ ಬಿಜೆಪಿಯಲ್ಲಿ 75 ವರ್ಷಕ್ಕೆ ನಿವೃತ್ತಿ ಆಟಂ ಬಾಂಬ್ ಎದ್ದಿರುವುದರಿಂದ ಮೋದಿ ನಿವೃತ್ತಿ ಆಗುವ ಸನ್ನಿವೇಶ ಸೃಷ್ಟಿಯಾಗಬಹುದು. ಹಾಗೇನಾದರೂ ಆದರೆ ಅಮಿತ್ ಶಾ ಪ್ರಧಾನಿಯಾಗುವುದು ಖಚಿತ. ಶಾ ಪ್ರಧಾನಿಯಾದರೆ ಡಿಕೆಶಿ ಗೆ ಕೇಂದ್ರದಲ್ಲಿ ಬಂಪರ್ ಖಾತೆ ಸಿಗುವ ಸಂಭವ ಹೆಚ್ಚು. ಈ ನಿಟ್ಟಿನಲ್ಲಿ ಡಿಕೆಶಿ ಈಗ ಬಿಜೆಪಿ ಬಗ್ಗೆ ಸಾಫ್ಟ್ ಮೈಂಡ್ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಬೆನ್ನಿಗಿರಿದರೆ ಬಿಜೆಪಿಗೆ ಜಂಪ್ ಆಗುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಸದ್ಯ ಬಿಗ್ ನ್ಯೂಸ್ ಬರುವ ಎಲ್ಲಾ ಸಾಧ್ಯತೆಗಳಿವೆ.