7 ವರ್ಷ ತುಂಬಿದ ಮಕ್ಕಳ ಬಯೋಮೆಟ್ರಿಕ್ ಆಪ್ ಡೇಟ್ ಮಾಡಿಸದಿದ್ದರೆ ಅವರ ಆಧಾರ್ ಕಾರ್ಡ್ ಅನ್ನು ನಿಷ್ಕ್ರೀಯಗೊಳಿಸಲಾಗುವುದು ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಡಿಎಐ) ಎಚ್ಚರಿಸಿದೆ. ಜತೆಗೆ, ಅಂತಹವರ ಸಂಖ್ಯೆಗಳಿಗೆ ರಿಮೈಂಡರ್ ಸಂದೇಶಗಳನ್ನೂ ಕಳಿಸತೊಡಗಿದೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾಗ ಆಧಾರ್ ಕಾರ್ಡ್ ಮಾಡಿಸಲಾದ ಮಕ್ಕಳಿಗೆ 7 ವರ್ಷ ಆಗುತ್ತಿದ್ದಂತೆ ಬೆರಳಚ್ಚು, ಪೋಟೋ ಸೇರಿದಂತೆ ಇತರೆ ಬಯೋಮೆಟ್ರಿಕ್ ಗಳನ್ನು ಆಪ್ ಡೇಟ್ ಮಾಡಿಸುವುದು ಕಡ್ಡಾಯ. ಮಕ್ಕಳ ಬಯೋಮೆಟ್ರಿಕ್ ಡೇಟಾದ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಇದರ ಉದ್ದೇಶವಾಗಿದೆ. 5 ರಿಂದ 7 ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್ ಆಪ್ ಡೇಟ್ ಉಚಿತವಾಗಿ ಮಾಡಲಾಗುವುದು. 7 ವರ್ಷ ಮೇಲ್ಪಟ್ಟವರಿಗೆ 100 ರೂಪಾಯಿ ಶುಲ್ಕ ವಿಧಿಸಲಾಗುವುದು ಎಂದು ಯುಡಿಎಐ ತಿಳಿಸಿದೆ.
