ಲಂಡನ್ ಕ್ಯುಎಸ್ ಸಂಸ್ಥೆ ಪಟ್ಟಿ ಬಿಡುಗಡೆ
ವಿದ್ಯಾರ್ಥಿಗಳಿಗೆ ಅತ್ಯುತ್ತಮ 130 ಜಾಗತಿಕ ನಗರಗಳ ಪಟ್ಟಿಯಲ್ಲಿ ಭಾರತದ ನಾಲ್ಕು ನಗರಗಳು ಸ್ಥಾನಗಿಟ್ಟಿಸಿದ್ದು, ಬೆಂಗಳೂರಿಗೂ ಪಟ್ಟಿಯಲ್ಲಿ ಸ್ಥಾನ ದೊರೆತಿದೆ.
ಲಂಡನ್ ನ ಕ್ಯುಎಸ್ ಸಂಸ್ಥೆ ನಡೆಸಿದ ಜಾಗತಿಕ 130 ನಗರಗಳಲ್ಲಿ ಬೆಂಗಳೂರು ಜೊತೆ ದೆಹಲಿ, ಮುಂಬೈ, ಚೆನ್ನೈ ಸೇರಿದೆ.

ಮೊದಲ ನೂರು ನಗರಗಳ ಪಟ್ಟಿಯಲ್ಲಿ ದೆಹಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಮುಂಬೈ ಕಳೆದ ಬಾರಿಗಿಂತ 15 ಸ್ಥಾನ ಮೇಲಕ್ಕೇರಿದ್ದು, 98 ಸ್ಥಾನ ಪಡೆದಿದೆ. ದೆಹಲಿ ಏಳು ಸ್ಥಾನ ಮೇಲೆ ಬಂದಿದ್ದು 104 ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಕಳೆದ ಬಾರಿಗಿಂತ 22 ಸ್ಥಾನ ಮೇಲಕ್ಕೇರಿದ್ದು, 108 ನೇ ಸ್ಥಾನ ಪಡೆದುಕೊಂಡಿದೆ. ಚೆನ್ನೈ 128 ನೇ ಸ್ಥಾನದಲ್ಲಿದೆ. ಉದ್ಯೋಗಾವಕಾಶಗಳ ವಿಭಾಗದಲ್ಲಿ ದೆಹಲಿ ಮತ್ತು ಮುಂಬೈ ಟಾಪ್ 50 ನಗರಗಳಲ್ಲಿವೆ, ಬೆಂಗಳೂರಿಗೆ 59 ನೇ ಸ್ಥಾನ ದೊರಕಿದೆ.
ಪಟ್ಟಿಯಲ್ಲಿ ಸತತ ಆರು ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿ ವಿರಾಜಿಸುತ್ತಿದ್ದ ಲಂಡನ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಠಿದೆ. ದಕ್ಷಿಣ ಕೊರಿಯಾದ ಸೋಲ್ ನಗರ ನಂಬರ್ ಒನ್ ಸ್ಥಾನಕ್ಕೇರಿದೆ.
