ಅಸ್ಮಿತ ಖೇಲೋ ಇಂಡಿಯಾ ಕ್ರೀಡಾಕೂಟದ ಟ್ವೆಕಾಂಡೋ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಚಿನ್ನದ ಪದಕ

ಕರಾವಳಿ

ಬೈಕಂಪಾಡಿ ಬೆಟ್ರಂಡ್ ರೆಸೆಲ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸ್ವಪ್ನಾ ಐತಿಹಾಸಿಕ ದಾಖಲೆ

ಬಂಟ್ವಾಳ: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಸ್ಮಿತ ಖೇಲೋ ಇಂಡಿಯಾ ಕ್ರೀಡಾಕೂಟದ ಟ್ವೆಕಾಂಡೋ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಚಿನ್ನದ ಪದಕದ ಗೌರವ ದೊರೆತಿದೆ.

ಬೈಕಂಪಾಡಿ ಬೆಟ್ರಂಡ್ ರೆಸೆಲ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸ್ವಪ್ನಾ ಅವರು ಈ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಸ್ವಪ್ನಾ ಅವರು ಕೆಡೆಟ್ ಮಹಿಳಾ ಅಂಡರ್-33 ಕೆಜಿ ಟೆಕ್ವಾಂಡೋ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ದಕ್ಷಿಣ ಕನ್ನಡ ಟೆಕ್ವಾಂಡೋ ಮುಖ್ಯ ತರಬೇತುದಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಟ್ವೆಕಾಂಡೋ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಇಸ್ಮಾಯಿಲ್ ನಂದಾವರ ಹಾಗೂ ಸಹಾಯಕ ತರಬೇತುದಾರ ಮೇಹುಲ್ ಬಂಗೇರಾ ಅವರ ಮಾರ್ಗದರ್ಶನದಲ್ಲಿ ಸ್ವಪ್ನಾ ಅವರು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ವಿಶೇಷ ಸಾಧನೆಗೈಯುವ ಮೂಲಕ ಸ್ವಪ್ನಾ ಅವರು ಖೇಲೋ ಇಂಡಿಯಾ ರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಪ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಸುರತ್ಕಲ್-ಕುಳಾಯಿ ನಿವಾಸಿ ಮದ್ದಣ್ಣ-ಮಮತಾ ದಂಪತಿಯ ಪುತ್ರಿಯಾಗಿದ್ದಾರೆ.