ಅಕ್ರಮ ಬೆಟ್ಟಿಂಗ್ ದಂಧೆ: 110 ಕೋಟಿ ರೂಪಾಯಿ, 1,200 ಕ್ರೆಡಿಟ್ ಕಾರ್ಡ್‌ ಇ.ಡಿ ವಶ

ರಾಷ್ಟ್ರೀಯ

ಸೈಪ್ರಸ್ ಮೂಲದ ‘ಅಕ್ರಮ’ ಆನ್‌ಲೈನ್ ಬೆಟ್ಟಿಂಗ್ ವೇದಿಕೆಯಾದ ಪ್ಯಾರಿಮ್ಯಾಚ್‌ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಶೋಧ ನಡೆಸಿದೆ. ಅಕ್ರಮಕ್ಕೆ ಬಳಸಿಕೊಂಡಿದ್ದ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 110 ಕೋಟಿ ರೂಪಾಯಿಯನ್ನು, 1,200 ಕ್ರೆಡಿಟ್ ಕಾರ್ಡ್‌ಗಳನ್ನು ಇ.ಡಿ ವಶಪಡಿಸಿಕೊಂಡಿದೆ.

ಪ್ಯಾರಿಮ್ಯಾಚ್ ಕಾರ್ಯಾಚರಣೆಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ಭಾಗವಾಗಿ ಆಗಸ್ಟ್ 12 ರಂದು ಮುಂಬೈ, ನೋಯ್ಡಾ, ಜೈಪುರ, ಸೂರತ್, ಮಧುರೈ, ಕಾನ್ಪುರ ಮತ್ತು ಹೈದರಾಬಾದ್‌ನ 17 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿತ್ತು.

ಆನ್‌ಲೈನ್ ಬೆಟ್ಟಿಂಗ್ ಮೂಲಕ ಬಳಕೆದಾರರಿಗೆ “ವಂಚನೆ” ಮಾಡಿದ್ದಕ್ಕಾಗಿ ಪ್ಯಾರಿಮ್ಯಾಚ್.ಕಾಮ್ ವಿರುದ್ಧ ಮುಂಬೈ ಪೊಲೀಸರ ಸೈಬರ್ ಪೊಲೀಸ್ ಠಾಣೆ ದಾಖಲಾಗಿದ್ದ ಎಫ್‌ಐಆರ್‌ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿದೆ.