ನಮ್ಮ ನಡುವೆ ಅಗರ್ಭ ಶ್ರೀಮಂತರು ನೂರಾರು ಮಂದಿ ಇರಬಹುದು. ಆದರೆ ಹೃದಯವಂತ ಶ್ರೀಮಂತರ ಸಂಖ್ಯೆ ಮಾತ್ರ ಬೆರಳೆಣಿಕೆಯದ್ದು. ಅಂತಹ ಹೃದಯವಂತ ಶ್ರೀಮಂತರಲ್ಲಿ ಶರೀಫ್ ಹಾಜಿ ಜೋಕಟ್ಟೆ ಕೂಡ ಒಬ್ಬರು. ಜನಮಾನಸದಲ್ಲಿ ವೈಟ್ ಸ್ಟೋನ್ ಶರೀಫ್ ಎಂದೇ ಜನಪ್ರಿಯರು.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಶರೀಫ್ ಜೋಕಟ್ಟೆ ಸಮುದಾಯದ ಹಿತ ಮತ್ತು ಶಿಕ್ಷಣದ ಪ್ರಗತಿಗಾಗಿ ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದಾಯದ ಶೈಕ್ಷಣಿಕ ಏಳಿಗೆಗಾಗಿ ರಚಿಸಲ್ಪಟ್ಟ ಅನೇಕ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯ ನಾಯಕತ್ವ ವಹಿಸಿಕೊಂಡಿದ್ದಾರೆ.
ಬಿ ಹ್ಯೂಮನ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಶರೀಫ್ ಹಾಜಿ ಸರಕಾರಿ ಪ್ರೌಢಶಾಲೆ, ಕಾಶಿಪಟ್ನಗೆ ವಾಟರ್ ಕೂಲರ್ ಅನ್ನು ದಾನವಾಗಿ ನೀಡಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಾಶ್ವತ ಅನುಕೂಲವನ್ನು ಒದಗಿಸಿದ್ದಾರೆ. ಶರೀಫ್ ಹಾಜಿಯ ಕೊಡುಗೆಗೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ಮಂಡಳಿ ಧನ್ಯವಾದ ಸಲ್ಲಿಸಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳು, ಈಗ ಶುದ್ಧವಾದ ತಂಪು ನೀರು ಮತ್ತು ಬಿಸಿನೀರನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದು ಅವರ ಆರೋಗ್ಯ ಮತ್ತು ಚಟುವಟಿಕೆಗೆ ಒಂದು ಮಹತ್ವದ ಅಂಶವಾಗಿದೆ ಎಂದಿದ್ದಾರೆ.
ಹೃದಯವಂತ ಶ್ರೀಮಂತರಾದ ಶರೀಫ್ ಜೋಕಟ್ಟೆ ಬಿ ಹ್ಯೂಮನ್ ಟ್ರಸ್ಟ್ ಅಧ್ಯಕ್ಷರಾಗಿದ್ದು, ಸಾಮಾಜಿಕ ಕಳಕಳಿಯ ನೇತಾರರಾಗಿದ್ದಾರೆ. ಸಮುದಾಯದ ಏಳಿಗೆಗಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಶರೀಫ್ ರವರ ಕಾರ್ಯ ವೈಖರಿಗೆ ಜಿಲ್ಲೆಯ ಜನ ಫಿದಾ ಆಗಿದ್ದಾರೆ.
