ಮೂತ್ರಶಾಸ್ತ್ರದ ಖ್ಯಾತ ತಜ್ಞ ಡಾ.ಜಿ.ಜಿ. ಲಕ್ಷ್ಮಣ ಪ್ರಭು ವಿಧಿವಶ

ಕರಾವಳಿ

ಡಾಕ್ಟರ್ ಲಕ್ಷ್ಮಣ ಪ್ರಭು ವಾರದ ಹಿಂದೆ ಕರ್ತವ್ಯದಲ್ಲಿರುವಾಗ ಹೃದಯಾಘಾತಕ್ಕೆ ಒಳಗಾಗಿ, ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಇಂದು ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಅಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಹಲವಾರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಅನುಭವ ಹೊಂದಿದ್ದ ಅವರು ಕೆಎಂಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತಿ ಹೊಂದಿದ ಡಾ.ಲಕ್ಷ್ಮಣ ಪ್ರಭುರವರು ಯುರೊಲಿಥಿಯಾಸಿಸ್, ಆಂಡ್ರಾಲಜಿ, ಯುರೊಡೈನಾಮಿಕ್ಸ್, ರೆಕಾನ್-ಯೂರಾಲಜಿ, ಯುರೊಜಿನೆಕಾಲಜಿ ಮತ್ತು ಎಂಡೋರಾಲಜಿಯಲ್ಲಿ ಹೆಚ್ಚು ಪರಿಣತಿಯನ್ನು ಹೊಂದಿದ್ದರು.