ಮಹಿಳೆಯೊಬ್ಬರನ್ನು ಅಪಹರಿಸಿ ಬರೊಬ್ಬರಿ 6 ತಿಂಗಳ ಕಾಲ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಭೀಕರ ಘಟನೆ ಭುವನೇಶ್ವರದಲ್ಲಿ ವರದಿಯಾಗಿದೆ.
ಇಪ್ಪತ್ತಮೂರು ವರ್ಷದ ಮಹಿಳೆಯನ್ನು ಸ್ಥಳೀಯ ವ್ಯಕ್ತಿಯೊಬ್ಬ ಅಪಹರಿಸಿ, ಆರು ತಿಂಗಳಿನಿಂದ ಹಲವಾರು ವ್ಯಕ್ತಿಗಳೊಂದಿಗೆ ಸೇರಿ ಒರುಪಾದ ಎಂಬ ಪ್ರದೇಶದಲ್ಲಿ ಅತ್ಯಾಚಾರ ಮಾಡಿದ್ದಾರೆ. ಮಯೂರ್ಭಂಜ್ ಜಿಲ್ಲೆಯ ಬರಿಪಾದದಲ್ಲಿ ಕಳೆದ ಆರು ತಿಂಗಳಿನಿಂದ ತನ್ನನ್ನು ಅಪಹರಿಸಿ ಇರಿಸಲಾಗಿದ್ದು, ಈ ಸಮಯದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ದೈಹಿಕ ಹಿಂಸೆ ನೀಡಲಾಗಿದೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿರುತ್ತಾಳೆ. ಆರೋಪಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.
