ವಿಟ್ಲ ಬಳಿ ಆಟವಾಡುತ್ತಿದ್ದ ಪುಟ್ಟ ಬಾಲಕಿ. ಬಾಲಕಿಯ ಬಲಿ ಪಡೆದ ಜೋಕಾಲಿ ಹಗ್ಗ.

ಕರಾವಳಿ

ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ಮನಕಲಕುವ ಘಟನೆ ನಡೆದಿದೆ. ಮಡಲ ನಿವಾಸಿ ಕಿಶೋರ್ ಎಂಬವರ ಪುತ್ರಿ ಮಾಣಿ ಸಮೀಪದ ಸೇರ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ತೀರ್ಥಶ್ರೀ(8) ಮೃತ ಬಾಲಕಿ.
ರವಿವಾರದಂದು ಜೋಕಾಲಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಕುತ್ತಿಗೆಗೆ ಜೋಕಾಲಿ ಹಗ್ಗ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.

ಈ ಹಿಂದೆ ಇದೇ ರೀತಿ ಅನಂತಾಡಿ ಗ್ರಾಮದಲ್ಲಿ, ವಿಟ್ಲ ಸಮೀಪದ ಉಕ್ಕುಡ ದರ್ಬೆಯಲ್ಲೂ ಜೋಕಾಲಿ ಹಗ್ಗ ಕುತ್ತಿಗೆಗೆ ಸಿಲುಕಿ ಪುಟಾಣಿಗಳು ಸಾವನ್ನಪ್ಪಿದ್ದರು. ಮಕ್ಕಳು ಆಟವಾಡುವ ಸಂದರ್ಭ ಪೋಷಕರು ಕೂಡಾ ಅವರತ್ತ ಗಮನಹರಿಸಬೇಕೆಂಬುದು ಇಂತಹ ದುರ್ಘಟನೆಗಳು ನಡೆದಾಗ ಅಗತ್ಯವಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.