ರಾಜಧಾನಿ ಬೆಂಗಳೂರಿನಲ್ಲಿ ಯೋಗ ದ ಹೆಸರಲ್ಲಿ ಯೋಗಗುರುವಿನ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿದ ಪ್ರಕರಣ ದಾಖಲಾಗಿದೆ. ರಾಜರಾಜೇಶ್ವರಿ ನಗರ ಪೊಲೀಸರಿಂದ ಆರೋಪಿ ಯೋಗ ಗುರು ನಿರಂಜನಾ ಮೂರ್ತಿ ಬಂಧನವಾಗಿದೆ.ಆರೋಪಿ ನಿರಂಜನಾ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರ ನಡೆಸುತಿದ್ದ ಎನ್ನಲಾಗಿದೆ.
ಯೋಗ ಸೆಂಟರ್ ಗೆ ಯೋಗದ ಕ್ಲಾಸಿಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಅಡಿಯಲ್ಲಿ ಬಂಧನ ಮಾಡಲಾಗಿದೆ. ಹದಿನೇಳು ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿ ಯೋಗ ಗುರು ನಿರಂಜನಾ ಮೂರ್ತಿ ವಿರುದ್ಧ ತನಿಖೆ ನಡೆಯುತ್ತಿದೆ. ಅಪ್ರಾಪ್ತ ಬಾಲಕಿ ಬಳಿ ನಿನಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಬರುವಂತೆ ಮಾಡುತ್ತೇನೆ. ಅದರಿಂದ ನಿನಗೆ ಸರ್ಕಾರಿ ಕೆಲಸವೂ ಸಿಗಬಹುದು ಎಂದು ನಂಬಿಸಿ ಯೋಗ ಕೇಂದ್ರಕ್ಕೆ ಬರುತ್ತಿದ್ದ ಯುವತಿಯರು ಸೇರಿದಂತೆ ಸುಮಾರು ಏಳೆಂಟು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಇದೀಗ ಪೊಲೀಸರು ಯೋಗಗುರು ನಿರಂಜನಾ ಮೂರ್ತಿಯನ್ನು ಬಂಧಿಸಿದ್ದಾರೆ.
ಅಲ್ಲದೇ ಆರೋಪಿ ನಿರಂಜನಾ ಮೂರ್ತಿ ಇದಕ್ಕೂ ಮುನ್ನ ಏಳೆಂಟು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾಗಿ ಹೇಳಲಾಗಿದ್ದು, ತನಿಖೆ ನಡೆಯುತ್ತಿದೆ. ಹೀಗಾಗಿ ಈ ಕಾಮುಕ ಯೋಗ ಗುರುವಿನಿಂದ ಯಾರಾದರೂ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಒಳಗಾಗಿದ್ದರೆ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
