ಯತ್ನಾಳ್ ಹೇಳಿಕೆ ಸನಾತನ ಹಿಂದುತ್ವದ ಅಪಾಯಕಾರಿ ಸಿದ್ಧಾಂತದ ದ್ಯೋತಕವಾಗಿದೆ: ಶೇಖರ್ ಲಾಯಿಲ

ರಾಜ್ಯ

ನಾಡಹಬ್ಬ ಮೈಸೂರು ದಸರಾವನ್ನು ವಿವಾದಾತ್ಮಕ ವಿಷಯವನ್ನಾಗಿಸಿದ ಬಿಜೆಪಿ, ಸಂಘಪರಿವಾರಕ್ಕೆ ರಾಜ್ಯ ಹೈಕೋರ್ಟ್ ತೀರ್ಪು ತೀವ್ರ ಹಿನ್ನಡೆಯಾದ ಹಿನ್ನೆಲೆಯಲ್ಲಿ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದೆ. ಚಾಮುಂಡೇಶ್ವರಿಗೆ ದಲಿತ ಮಹಿಳೆಯರು ಹೂವು ಹಾಕಲು ಅರ್ಹರಲ್ಲ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನ ಹೇಳಿಕೆ ಸನಾತನ ಹಿಂದುತ್ವದ ನಿಜವಾದ ರೂಪ. ಇದು ಹಿಂದೂ ಧರ್ಮದ ಅಸಮಾನತೆಯನ್ನು ಮತ್ತೊಮ್ಮೆ ಬಹಿರಂಗ ಪಡಿಸಿದಂತಾಗಿದೆ.

ದಸರಾ ಉತ್ಸವವನ್ನು ನಾಡಿನ ಹಿರಿಯ ಸಾಹಿತಿ, ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರು ಉದ್ಘಾಟಿಸುತ್ತಿರುವುದನ್ನು ರಾಜ್ಯ ಹೈಕೋರ್ಟ್ ಸಮರ್ಥಿಸಿದ ಬಳಿಕ ಬಿಜೆಪಿ, ಸಂಘಪರಿವಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಳ್ ಎಂಬಾತ ಮುಸ್ಲಿಂ ಧರ್ಮಾನುಯಾಯಿ ಬಾನು ಮುಷ್ತಾಕ್ ಬಿಡಿ, ದಲಿತ ಸಮುದಾಯದ ಮಹಿಳೆಯರು ಚಾಮುಂಡೇಶ್ವರಿಗೆ ಹೂವು ಹಾಕುವ ಅರ್ಹತೆ ಹೊಂದಿಲ್ಲ ಎಂದು ಹೇಳಿಕೆ ನೀಡಿದ್ದು, ಇದು ಸನಾತನ ಹಿಂದುತ್ವದ ಅಪಾಯಕಾರಿ ಸಿದ್ಧಾಂತದ ದ್ಯೋತಕವಾಗಿದೆ.

ಶತಮಾನಗಳಿಂದ ದಲಿತ ಸಮುದಾಯವನ್ನು ಹಿಂದೂ ಧರ್ಮ ಹೊರಗಿಟ್ಟಿದ್ದು, ಅದರ ಭಾಗವೇ ಯತ್ನಳ್ ಹೇಳಿಕೆಯಾಗಿದೆ. ದಲಿತರು ಹಿಂದೂ ಧರ್ಮದ ವ್ಯಾಪ್ತಿಯೊಳಗೆ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಹೊರಗಿಟ್ಟ ನಿಜ ಬಣ್ಣ ಈಗ ಬಯಲಾಗಿದೆ.

ಚಾಮುಂಡೇಶ್ವರಿಗೆ ಹೂವು ಹಾಕಿ ದಲಿತ ಸಮುದಾಯಕ್ಕೆ ಏನೂ ಲಾಭವಿಲ್ಲ, ಹೂವು ಹಾಕಿದ ನಂತರ ದಲಿತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಬದಲಾವಣೆ ಆಗಲ್ಲ. ಆದರೂ ಹಿಂದುತ್ವದ ನಿಜವಾದ ಬಣ್ಣವನ್ನು ಯತ್ನಳ್ ಎಂಬ ಮಾನಸಿಕ ಅಸ್ವಸ್ಥ ಹೊರಹಾಕಿದ್ದಾನೆ. ಹಿಂದೂ ನಾವೆಲ್ಲರೂ ಒಂದು ಎಂಬುದು ಕೇವಲ ಬೂಟಾಟಿಕೆಯ ಘೋಷಣೆ ಮಾತ್ರ. ಹಿಂದುತ್ವದ ಹೆಸರಿನಲ್ಲಿ ದಲಿತ ಸಮುದಾಯದ ಮಹಿಳೆಯರನ್ನು ಅವಹೇಳನ ಮಾಡಿ, ಜಾತಿಯ ಏಕೈಕ ಕಾರಣಕ್ಕಾಗಿ ಅವಮಾನ ಮಾಡಿದ ಯತ್ನಳ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗಟ್ಟಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ‌.