ಅಕ್ರಮ ಗೋಹತ್ಯೆ ಪ್ರಕರಣ ಭೇದಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು; 9 ದನಗಳನ್ನು ರಕ್ಷಿಸಿ ಗೋಶಾಲೆಗೆ ಹಸ್ತಾಂತರ

ಕರಾವಳಿ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕೆರೆ ಬಳಿ ನಾಸಿರ್ ಮತ್ತು ಇತರರು ದನವನ್ನು ತಂದು ವಧೆ ಮಾಡುತ್ತಿರುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೊಲೀಸರು ದಿನಾಂಕ 21.09.2025 ಇದಿನಬ್ಬ ರವರ ವಾಸದ ಮನೆ ಹಿಂಭಾಗದಲ್ಲಿರುವ ಶೆಡ್ಡಿಗೆ ದಾಳಿ ನಡೆಸಿರುತ್ತಾರೆ.

ದಾಳಿ ಸಯಯದಲ್ಲಿ ನಾಸಿರ್ @ ಹುಸೇನಬ್ಬ ಸಂಗಬೆಟ್ಟು ಬಂಟ್ವಾಳ, ರಶೀದ್, ಮತ್ತು ಇತರರು ಕತ್ತಿ ಮತ್ತು ಚೂರಿಯಿಂದ ಒಂದು ದನವನ್ನು ವಧೆ ಮಾಡಿ ಹಾಕಿದ್ದರು. ಪೊಲೀಸರನ್ನು ಕಂಡು ಆರೋಪಿಗಳಾದ ನಾಸಿರ್ ಮತ್ತು ಇತರರು ಓಡಿ ಹೋಗಿದ್ದು ಸ್ಥಳದಲ್ಲಿದ್ದ ತೌಸೀಫ್, ಮುಲ್ಕಿ ಎಂಬಾತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಆರೋಪಿತರು ಯಾವುದೇ ಪರವಾನಿಗೆ ಇಲ್ಲದೇ ಸುಮಾರು 6 ವರ್ಷ ಪ್ರಾಯದ ಒಂದು ಹಸುವನ್ನು ವಧೆ ಮಾಡಿ ಹಾಕಿದ್ದಲ್ಲದೆ ವದೆ ಮಾಡಲು ತಂದು ಕಟ್ಟಿ ಹಾಕಿರುವ 9 ದನಗಳನ್ನು ರಕ್ಷಿಸಿ ಗೋಶಾಲೆಗೆ ಹಸ್ತಾಂತರಿಸಿರುತ್ತಾರೆ.

ಕೃತ್ಯಕ್ಕೆ ಬಳಸಿದ ವಾಹನ KA19 AE1337 ಆಟೋರಿಕ್ಷಾವನ್ನು ಸ್ವಾಧಿನಪಡಿಸಿಕೊಂಡು ಈ ಬಗ್ಗೆ ಠಾಣೆಯಲ್ಲಿ ಅಕ್ರ 143/2025 ಕಲಂ: 303(2), 307 ಬಿ.ಎನ್‌.ಎಸ್‌ ಕಲಂ: 4,7,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಹಾಗೂ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ದಾಳಿ ಸಮಯದಲ್ಲಿ ವಶಕ್ಕೆ ಪಡೆದ ತೌಸೀಫ್ ಮುಲ್ಕಿ, ಎಂಬಾತನನ್ನು ಬಂಧಿಸಿ ಆತನನ್ನು ಬಂಟ್ವಾಳ ನ್ಯಾಯಾಲಯ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.