ಬಂಟ್ವಾಳ: ಜಾನುವಾರು ಹತ್ಯೆ ಪ್ರಕರಣ; ಗೋ ಕಳವು, ಗೋವಧೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯ ಮನೆ, ಅಕ್ರಮ ಕಸಾಯಿಖಾನೆ ಜಪ್ತಿ ಮಾಡಿ ಸರಕಾರದ ವಶಕ್ಕೆ.

ಕರಾವಳಿ

ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ನಿವಾಸಿಯಾದ ಹಸನಬ್ಬ ಎಂಬಾವರು ಗೋ ಕಳವು, ಗೋವಧೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದು ಈತನ ಮೇಲೆ ಗೋಸಂರಕ್ಷಣಾ ಕಾಯಿದೆ ಮತ್ತು ಗೋಹತ್ಯೆ ನಿಷೇಧ ಕಾಯಿದೆಯಡಿ ದಾಖಲಾದ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಮಾನ್ಯ ಎಸಿಜೆ ಮತ್ತು ಜೆಎಮ್‌ ಎಫ್‌ ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು.

ಈತನ ವಿರುದ್ದ 2017 ನೇ ಸಾಲಿನಲ್ಲಿ ಅಕ್ರ 65/2017 ಕಲಂ 379 ಐಪಿಸಿ ಮತ್ತು 4,5,11 ಗೋಸಂರಕ್ಷಣಾ ಕಾಯಿದೆ ಮತ್ತು 11(ಎಲ್‌) ಗೋಹತ್ಯೆ ನಿಷೇಧ ಕಾಯಿದೆ , 2008 ನೇ ಸಾಲಿನಲ್ಲಿ ಅಕ್ರ 88/2018 ಕಲಂ 379 ಐಪಿಸಿ ಮತ್ತು 4,5,11 ಗೋಸಂರಕ್ಷಣಾ ಕಾಯಿದೆ ಮತ್ತು 11(ಎಲ್‌) ಗೋಹತ್ಯೆ ನಿಷೇಧ ಕಾಯಿದೆಯಂತೆ ಪ್ರಕರಣಗಳು ದಾಖಲಾಗಿರುತ್ತದೆ. ಹಾಗೂ ಗೋ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಕಳವು ಮಾಡಿ ತಂದಂತಹ ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಮನೆಯಲ್ಲಿಯೇ ಕಸಾಯಿಖಾನೆ ನಿರ್ಮಾಣ ಮಾಡಿ, ವಧೆ ಮಾಡಿ ಮಾಂಸ ಮಾಡುತ್ತಿದ್ದು, ಈತನು ಅಕ್ರಮವಾಗಿ ನಿರ್ಮಾಣ ಮಾಡಿರುವ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಉಪವಿಭಾಗರವರಿಗೆ ಪೊಲೀಸರು ವರದಿಯನ್ನು ಸಲ್ಲಿಸಿರುತ್ತಾರೆ.

ಅದರಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ರವರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಂ 8(4) 8(5) ರಡಿಯಲ್ಲಿ ದಿನಾಂಕ: 25/09/2025 ರಂದು ಪ್ರಕರಣ ಸಂಖ್ಯೆ ಎಂ.ಎ.ಜಿ/ಎಸ್‌ ಆರ್‌ .44/2025‌ ರಂತೆ ಠಾಣಾ ಅಕ್ರಮ ಸಂಖ್ಯೆ 123/2025 ದರಂತೆ ಹಸನಬ್ಬ ಎಂಬವರ ವಶದಲ್ಲಿರುವ ಪುದು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾರಿಪಳ್ಳ ಪಾಡಿ ಎಂಬಲ್ಲಿರುವ ಮನೆ ನಂಬ್ರ 6-54 ಹಾಗೂ 6-54(1) ಮನೆ, ಅಕ್ರಮ ಕಸಾಯಿಖಾನೆಯನ್ನು ಜಪ್ತಿ ಮಾಡಿ ಸರಕಾರದ ವಶಕ್ಕೆ ಪಡೆಯಲಾಗಿದೆ.