ಬೆಂಗಳೂರಿನಿಂದ ಮಾದಕ ವಸ್ತು (MDMA) ತಂದು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ಸರಬರಾಜು ಮಾಡುತ್ತಿದ್ದ ತಂಡವನ್ನು ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ದಿನಾಂಕ:13.12.2025 ರಂದು ಕಾರಿನಲ್ಲಿ ಬರುತ್ತಿದ್ದ ತಂಡವನ್ನು ಹಾಗೂ ಮಾದಕ ವಸ್ತುವನ್ನು ಅರ್ಕುಳ ಬಳಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುತ್ತಾರೆ.
ಆರೋಪಿಗಳಾದ ಅಹಮ್ಮದ್ ಶಾಬೀತ್, ಬದ್ರಿಯಾ ನಗರ ಮಲ್ಲೂರು, ಇದೀಗ ವಾಸ: ಬಾಡಿಗೆ ಮನೆ ಶಾಂತಿ ಅಂಗಡಿ, ಜೋಡು ಮಾರ್ಗ ಬಿ.ಸಿ.ರೋಡ್. ಮಹಮ್ಮದ್ ಶಂಶೀರ್ ಮದ್ದ ಪರ್ಲಿಯಾ, ಜೋಡುಮಾರ್ಗ, ಬಂಟ್ವಾಳ. ಶ್ರೀಮತಿ ನೌಶೀನ, ವಾಸ: ಮಠದಬೆಟ್ಟು ಹೌಸ್, ಸರಪಾಡಿ, ಬಂಟ್ವಾಳ. ಆರೋಪಿಗಳಿಂದ 90 ಗ್ರಾಂ ಮೌಲ್ಯದ MDMA ಮಾದಕ ವಸ್ತು, ಬಿಳಿ ಬಣ್ಣದ KL-58-W-6342 ಮಾರುತಿ ಸ್ವಿಪ್ಟ್ ಕಾರು ಮತ್ತು ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಅಹಮ್ಮದ್ ಶಾಬೀತ್ ಎಂಬುವನು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ನಿರಂತರವಾಗಿ ಬೆಂಗಳೂರಿನಿಂದ ಮಾದಕ ವಸ್ತುವಾದ MDMA ಯನ್ನು ತಂದು ಸರಬರಾಜು ಮಾಡುತ್ತಿದ್ದು, ಅಲ್ಲದೇ ಈ ತಂಡದಲ್ಲಿ ಯಾರಿಗೂ ಅನುಮಾನ ಬಾರದಂತೆ ಮಹಿಳೆಯಾದ ಶ್ರೀಮತಿ ನೌಶಿನ ಎಂಬವರನ್ನು ಜೊತೆಗೆ ಇರಿಸಿಕೊಂಡು ಮಾದಕ ವಸ್ತುವಾದ MDMA ಯನ್ನು ಸಾಗಾಟ ಮಾಡುತ್ತಿರುವುದ್ದನ್ನು, ಮಂಗಳೂರು ನಗರದ ಸಿಸಿಬಿ ಘಟಕದ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯನ್ನು ಕಲೆ ಹಾಕಿ, ಈ ತಂಡವನ್ನು ದಸ್ತಗಿರಿ ಮಾಡಿರುತ್ತಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿತರಿಗೆ ನ್ಯಾಯಾಂಗ ಬಂಧನ ವಿದಿಸಲಾಗಿದೆ.
