ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಗಳು ಭರ್ಜರಿ ಕಮಾಯಿ ಮಾಡುತ್ತಿದ್ದ ಕಾಲವೊಂದಿತ್ತು. ಎಲ್ಲವೂ ಸೆಟ್ಟಿಂಗ್, ಡೀಲಿಂಗ್ ಮೂಲಕವೇ ನಡೆಯುತ್ತಿತ್ತು. ಅಧಿಕಾರಿಗಳಿಗೆ ಮಂತ್ಲಿ ಕಪ್ಪ ಕಾಣಿಕೆ ಕೊಟ್ಟೇ ರಾಜಾರೋಷವಾಗಿ ನಡೆಯುತ್ತಿತ್ತು. ಮಂಗಳೂರು ನಗರದಾದ್ಯಂತ ಅಣಬೆಗಳಂತೆ ಮಸಾಜ್, ಸ್ಪಾ ಸೆಂಟರ್ ಗಳು ಹುಟ್ಟಿಕೊಂಡಿತ್ತು. ಗ್ರಾಹಕರು ಮಸಾಜ್ ಸೆಂಟರ್ ಗೆ ನುಗ್ಗಿದರೆ ದೇಹ ತಣಿಸಿಕೊಂಡೇ ಹೋಗುವ ಸಂಪೂರ್ಣ ವ್ಯವಸ್ಥೆ ಅಲ್ಲಿತ್ತು. ಗಂಟೆಗೆ ಇಂತಿಷ್ಟು ರೇಟ್ ಫಿಕ್ಸ್ ಮಾಡಿಕೊಂಡು ಚೆಂದುಳ್ಳಿ ಚೆಲುವೆಯರಿಂದಲೇ ದೇಹ ತಣಿಸುವ ಸಕಲ ಏರ್ಪಾಡುಗಳು ನಡೆಯುತ್ತಿತ್ತು. ಚೆಲುವೆಯರಿಗೆ ಎಕ್ಸ್ ಟ್ರಾ ಟಿಪ್ಸ್ ಕೊಟ್ಟರೆ ಸಾಕಿತ್ತು. ಆದರೆ ಮಂಗಳೂರು ನಗರಕ್ಕೆ ಸುಧೀರ್ ಕುಮಾರ್ ರೆಡ್ಡಿ ಯಂತಹ ಖಡಕ್ ಕಮೀಷನರ್ ಎಂಟ್ರಿಯಾಗುತ್ತಿದ್ದಂತೆ ಅಕ್ರಮವಾಗಿ ನಡೆಯುತ್ತಿದ್ದ ಎಲ್ಲಾ ಮಸಾಜ್ ಸೆಂಟರ್ ಗಳು ಬಾಗಿಲು ಹಾಕಿತ್ತು. ದೋ ನಂಬ್ರ ದಂದೆಕೋರರಂತು ಊರೇ ಬಿಟ್ಟಿದ್ದರು. ಆದರೆ ಇದೀಗ ತೆರೆಮರೆಯಲ್ಲಿ ಒಬ್ಬೊಬ್ಬರೆ ಅಡ್ಡೆಗಳನ್ನು ತೆರೆಯಲು ಪ್ರಾರಂಭಿಸುತ್ತಿದ್ದಾರೆ.
ಆದರೆ ಮಂಗಳೂರಿನಲ್ಲಿ ಈಗ ಖಡಕ್ ಪೊಲೀಸ್ ಆಫೀಸರ್ಸ್ ಗಳಿದ್ದಾರೆ. ಆದರೂ ಕೆಲವು ಯುನಿಸೆಕ್ಸ್ ಮಸಾಜ್ ಸೆಂಟರ್ ಗಳು ಪೊಲೀಸರ ಕಣ್ಣು ತಪ್ಪಿಸಿ ನಗರದ ಕೆಲವು ಕಡೆಗಳಲ್ಲಿ ಸಣ್ಣ ಮಟ್ಟದಲ್ಲಿ ಕದ್ದು ಮುಚ್ಚಿ ನಡೆಯುತ್ತಿದೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ ದಂಧೆಕೋರರು ರಂಗೋಲಿ ಕೆಳಗೆ ನುಸುಳ್ತಾರೆ ಅನ್ನುವ ಮಾತಿನಂತೆ ಪೊಲೀಸ್ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಸ್ಪಾ ಸೆಂಟರ್ ಗಳು ಕೆಲವು ಕಡೆಗಳಲ್ಲಿ ರುದ್ರ ನರ್ತನ ಮಾಡಲು ಪ್ರಾರಂಭಿಸಿದೆ.
ಯುನಿಸೆಕ್ಸ್ ಹೆಸರಿನಲ್ಲಿ ಮಸಾಜ್ ಸೆಂಟರ್ ಗಳು ನಗರದ ಕೆಲವು ಕಡೆಗಳಲ್ಲಿ ತಲೆ ಎತ್ತಿ ನಿಂತಿದೆ. ಹೊರಗೆ ಗಂಡು, ಹೆಣ್ಣು ಬಂದು ಕೂದಲು ಕಟ್ಟಿಂಗ್, ಬ್ಯೂಟಿ ಸ್ಪಾ ಮಾಡಿಕೊಳ್ಳುತ್ತಾರೆ ಅಂದರೆ ಅದು ನಿಮ್ಮ ಊಹೆ ತಪ್ಪು. ಒಳಗಡೆ ಮಜ್ ಬೂತಾದ ಬೆಡ್ ರೂಮ್ ನೊಳಗಡೆ ಥಕಥೈ ವ್ಯವಹಾರ ಖುಲ್ಲಾಂ ಖುಲ್ಲಾಂ ಆಗಿ ನಡೆಯುತ್ತಿದೆ. ತಮ್ಮದೇ ಆದ ಪರಿಚಯದ ಮಾಮೂಲು ಗ್ರಾಹಕರಿಗೆ ಮಾತ್ರ ಇಂತಹ ಸೇವೆ ಕೊಡುತ್ತಾರಂತೆ. ಒಳಗಡೆ ಚೆಲುವೆಯರು ನೀಡುವ ಸೇವೆಗೆ ನಾವು ಜವಾಬ್ದಾರರಲ್ಲ ಎಂದು ಸ್ಪಾ ಸೆಂಟರ್ ನಡೆಸುವವರು ನುಣುಚಿಕೊಳ್ಳುತ್ತಿದ್ದಾರೆ. ಗಂಡಸಿಗೆ ಹೆಣ್ಣು ಮಸಾಜ್ ನೀಡುವ ವ್ಯವಸ್ಥೆಯೇ ಅಕ್ರಮವಾದುದು. ಗ್ರಾಹಕ ದುಡ್ಡು ಕೊಟ್ಟರೆ ಚೆಲುವೆಯರು ಸುಖ ನೀಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಅನ್ನುವ ರೀತಿಯಲ್ಲಿ ದಂಧೆಕೋರರು ತಮ್ಮ ದಂಧೆಯನ್ನು ನಡೆಸಿಕೊಂಡು ಬರುತ್ತಿರುವುದು ಅಕ್ರಮವಲ್ಲದೇ ಮತ್ತೇನು.?

ಈ ಹಿಂದೆ ರಾಜ ವೈಭೋಗದ ರೀತಿ ನಡೆಯುತ್ತಿದ್ದ ದಂಧೆ ಈಗ ತೆರೆಮರೆಯಲ್ಲಿ ಕದ್ದು ಮುಚ್ಚಿ ನಡೆಯುತ್ತಿದೆ ಅಷ್ಟೇ. ಗಿರಾಕಿಗಳಿಗೆ ಟೈಮಿಂಗ್ ಕೊಡುತ್ತಾರೆ. ಅ ಸಮಯದಲ್ಲಿ ಎಂಟ್ರಿಯಾದರೆ ಸಖತ್ತ್ ಮಜಾ. ಗಂಟೆಗೆ ಸಾವಿರ, ಸಾವಿರ ರೂಪಾಯಿ ಕೊಟ್ಟು ಗ್ರಾಹಕರು ಒಳಹೊಕ್ಕರೆ ತಾವು ನೀಡುವ ಟಿಪ್ಸ್ ಆಧರಿಸಿ ಒಂದೊಂದನ್ನೇ ಕಳಚುತ್ತದಂತೆ. ಮತ್ತಷ್ಟು ಗಂಟು ನೀಡಿದರೆ ಎಲ್ಲವೂ ಕಳಚುತ್ತಾರಂತೆ.! ಮಸಾಜ್ ಸೆಂಟರ್ ಹೆಸರಿನಲ್ಲಿ ನಡೆಯುವ ವೇಶ್ಯಾವಾಟಿಕೆ ದಂಧೆ ಅಲ್ಲವೇ ಇದು. ಮಂಗಳೂರಿನ ಹಂಪನಕಟ್ಟೆ, ಬಂಟ್ಸ್ ಹಾಸ್ಟೆಲ್, ಕಂಕನಾಡಿ, ಕದ್ರಿ, ಬಿಜೈ, ಲಾಲ್ ಬಾಗ್, ಮಲ್ಲಿಕಟ್ಟೆ ಸುತ್ತಮುತ್ತ ಇಂತಹ ಹಲವು ಮಸಾಜ್ ಸೆಂಟರ್ ಗಳು ಭೂಗತವಾಗಿ ತಲೆ ಎತ್ತಿ ಕಾನೂನಿಗೆ ಮಣ್ಣೆರಚಿ ಅಕ್ರಮ ವ್ಯವಹಾರ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಹೊಸ ನಮೂನೆಯ ದಂಧೆಗೆ ಇಳಿದಿರುವ ಸ್ಪಾ ಸೆಂಟರ್ ಗಳು ಫೇಸ್ ಬುಕ್, ಇನ್ ಸ್ಟಾ ಗ್ರಾಮ್, ಇನ್ನಿತರ ಸಾಮಾಜಿಕ ಮಾಧ್ಯಮಗಳ ಮೂಲಕ ಗ್ರಾಹಕರಿಗೆ ಬಲೆ ಬೀಳಿಸುವ ದಂಧೆ ನಡೆಯುತ್ತಿದೆ. ನಿಮಗೆ ಮಸಾಜ್ ನೀಡುವ ಹುಡುಗಿಯರ ಪೋಟೋ, ಲೊಕೇಶನ್ ಬೇಕಿದ್ದರೆ 200 ಅಥವಾ 300 ರೂಪಾಯಿ ಗೂಗಲ್ ಪೇ ಮಾಡಿ ಮೊದಲು ಬುಕ್ಕಿಂಗ್ ಮಾಡಬೇಕಾಗುತ್ತದೆ. ಆ ನಂತರ ಚೆಂದುಳ್ಳಿ ಚೆಲುವೆಯರ ಪೋಟೋ, ಲೊಕೇಶನ್ ನಿಮ್ಮ ಮೊಬೈಲ್ ಗೆ ಬರುತ್ತದೆ. ನಿಮ್ಮ ಇಷ್ಟದ ಚೆಲುವೆಯನ್ನು ಸೆಟ್ ಮಾಡಿ ಹೋದರೆ ನಿಮಗೆ ಬೇಕಾದ ಎಲ್ಲಾ ಸೇವೆಗಳು ಲಭ್ಯ. ಗಂಟೆ, ದಿನ, ಇಡೀ ರಾತ್ರಿ ಸೇವೆ ನೀಡುವ ಸೌಲಭ್ಯಗಳು ಕೂಡ ಇವೆಯಂತೆ! ನೀವು ನೀಡುವ ಎಕ್ಸ್ ಟ್ರಾ ರೇಟ್ ಆಧರಿಸಿ ಸೇವೆ ಲಭ್ಯವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರಿಮಿನಲ್ ಗಳನ್ನು, ಕೋಮುಕ್ರಿಮಿಗಳನ್ನು, ಗೋ ಸಾಗಾಟಗಾರರನ್ನು ಬೆಂಡೆತ್ತಿದ ಪೊಲೀಸ್ ಇಲಾಖೆ ಸೆಕ್ಸ್ ದಂಧೆಗೆ ನೇರ ಆಹ್ವಾನ ನೀಡುವ ಇಂತಹ ಹಲಾಲುಕೋರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ಇಂತಹ ಅಡ್ಡೆಗಳನ್ನು ಮುಟ್ಟುಗೋಲು ಹಾಕುವ ಕೆಲಸ ಮಾಡಬೇಕಾಗಿದೆ. ದಕ್ಷ, ನೇರ ನಡೆನುಡಿಯ ಖಡಕ್ ಕಮೀಷನರ್ ಸಾಹೇಬ್ರು ಮಂಗಳೂರಿನಲ್ಲಿ ಇರುವಾಗಲೂ ಇಂತಹ ಅಡ್ಡ ಕಸುಬುಗಳಿಗೆ ಕೆಲವು ಅಧಿಕಾರಗಳು ಗಪ್ ಚುಪ್ ಆಗಿ ಸಾಥ್ ನೀಡುತ್ತಿದ್ದಾರೆಂಬ ಗುಸುಗುಸು ಸುದ್ದಿ ಇದೆ. ಪೊಲೀಸ್ ಇಲಾಖೆ ಇಂತಹ ಯುನಿಸೆಕ್ಸ್ ಸೆಂಟರ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.
