ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಬೀಡಿನಗುಡ್ಡೆಯಲ್ಲಿ ಪೌರ ಕಾರ್ಮಿಕನೋರ್ವ ಕಸ ವಿಲೇವಾರಿ ಗಾಡಿಯಲ್ಲಿ ನೇತಾಡಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.
ಮನೆಯಲ್ಲಿ ತಮ್ಮದೇ ಆದ ಕುಟುಂಬ ಕಾಯುತ್ತಿರುತ್ತಾರೆ ಅನ್ನುವ ಯೋಚನೆಯನ್ನೂ ಕೂಡ ಮಾಡದೇ ಪೌರ ಕಾರ್ಮಿಕರು ಇಂತಹ ದುಸ್ಸಾಹಸಕ್ಕೆ ಇಳಿಯುತ್ತಿದ್ದಾರೆ.

ಉಡುಪಿಯಲ್ಲಿ ಇಂತಹ ದೃಶ್ಯಗಳು, ಪೌರ ಕಾರ್ಮಿಕರ ಉಡಾಫೆ ವರ್ತನೆ ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡು ಮುಂದೆ ನಡೆಯಬಹುದಾದಂತಹ ಅನಾಹುತಕ್ಕೆ ಕಡಿವಾಣ ಹಾಕಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ಆಗ್ರಹಿಸಿದ್ದಾರೆ.