ರಾಜ್ಯದ ವಿದ್ಯುತ್ ಗ್ರಾಹಕರಿಗೆ ಭಾರಿ ಶಾಕ್, ವಿದ್ಯುತ್ ದರ ಹೆಚ್ಚಳಕ್ಕೆ ಚಿಂತನೆ; KERC ಮೊರೆ

ರಾಜ್ಯ

ವಿದ್ಯುತ್ ಸರಬರಾಜು ಕಂಪನಿಗಳ ಆದಾಯದಲ್ಲಿ 4,900 ಕೋಟಿ ರೂಪಾಯಿಯಷ್ಟು ನಷ್ಟ ಆಗಿದ್ದು, ಇದನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆಗೆ ತಯಾರಿ ನಡೆದಿದೆ. ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(KERC)ಕ್ಕೆ ವಾರ್ಷಿಕ ಕಾರ್ಯಕ್ಷಮತೆ ವರದಿ ಸಲ್ಲಿಸಿವೆ.2024- 25 ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸಿದ್ದು, ಆದಾಯದಲ್ಲಿ 4900 ಕೋಟಿ ರೂ. ಖೋತಾ ಆಗಿದೆ.

ಸಮತೋಲನ ಕಾಯ್ದುಕೊಳ್ಳಲು ವಿದ್ಯುತ್ ದರ ಪರಿಷ್ಕರಣೆ ಅಗತ್ಯವಿದೆ ಎಂದು ಎಸ್ಕಾಂ ಗಳು ಕೆಇಆರ್‌ಸಿಗೆ ವರದಿ ನೀಡಿದೆ. KERC ಪ್ರಸ್ತಾವದ ಬಗ್ಗೆ ಪರಿಶೀಲನೆ ನಡೆಸಲಿದೆ. ದರ ಪರಿಷ್ಕರಣೆ ನಿಟ್ಟಿನಲ್ಲಿ ಪರಿಶೀಲನೆ, ಸಾರ್ವಜನಿಕರ ಅಭಿಪ್ರಾಯ ಪಡೆದು ವಿದ್ಯುತ್ ದರ ಹೆಚ್ಚಲ ಬಗ್ಗೆ ಆದೇಶ ಹೊರಡಿಸಲಿದೆ. ಕೈಗಾರಿಕೆ, ಕಾರ್ಖಾನೆಗಳಿಗೆ ಹೊರೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.