ಆರು ಮಂದಿ ದನಗಳ್ಳರನ್ನು ಶಿರಸಿ ಗ್ರಾಮೀಣ ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗೊಲ್ಲರ ಬಿಡಾರದ ಮೋಹನ ಶೇಖಪ್ಪ ಗೊಲ್ಲರ, ಬಸವರಾಜ ಅಮ್ಮಣಪ್ಪ ಗೊಲ್ಲರ, ಅವಿನಾಶ ರುದ್ದಪ್ಪ ಗೊಲ್ಲರ, ಸುರೇಶ ಫಕೀರಪ್ಪ ಕೊಪ್ಪರಶಿಕೊಪ್ಪ ಗೊಲ್ಲರ, ಬಸವರಾಜ ಫಕೀರಪ್ಪ ಗೊಲ್ಲರ, ಅಯೂಬ ಅನೀಮ್ ಸಾಬ ಬಂಧಿತ ಗೋ ಕಳ್ಳರು.
ಬಿಳಗೇರಿ ಸರಗುಪ್ಪಾದಲ್ಲಿ ಜ.9 ರಂದು ಗ್ರಾಮದ ನಿವಾಸಿ ರಾಮಚಂದ್ರ ನರಸಿಂಹ ಗೌಡ ಮತ್ತು ಅವರ ಬಸಹೋದರರ ಹೊಲದಲ್ಲಿರುವ ಕೊಟ್ಟಿಗೆಗಳಲ್ಲಿ ಕಟ್ಟಿದ್ದ ನಾಲ್ಕು ಎತ್ತುಗಳು ಮತ್ತು ಮೂರು ಹೊರಿಗಳನ್ನು ಯಾರೋ ಅಪರಿಚಿತರು ಕಳ್ಳತನ ನಡೆಸಿದ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದನಗಳ್ಳತನ ಪ್ರಕರಣವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ, ವಿಶೇಷ ತಂಡ ರಚಿಸಲಾಗಿತ್ತು.
ಪೊಲೀಸರು ಜಾನುವಾರುಗಳನ್ನು ಕಳ್ಳತನ ಮಾಡುವ ತಂಡವನ್ನು ಪತ್ತೆ ಹಚ್ಚಿ ಗ್ಯಾಂಗಿನ ಒಟ್ಟು 6 ಮಂದಿ ಆರೋಪಿಗಳನ್ನು, ಮೂರು ಜಾನುವಾರುಗಳನ್ನು ರಕ್ಷಿಸಿ, ಕೃತ್ಯಕ್ಕೆ ಬಳಸಿದ್ದ ಮೂರು ಲಕ್ಷ ರೂ. ಮೌಲ್ಯದ ಮಹಿಂದ್ರಾ ಪಿಕ್ ಅಪ್ ವಾಹನ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ನಾಲ್ಕು ಆರೋಪಿಗಳು ನಾಪತ್ತೆಯಾಗಿದ್ದು, ಅವರನ್ನು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
