ಗಂಡ-ಹೆಂಡತಿ ಸೇರಿ ಹನಿಟ್ರ್ಯಾಪ್; 150ಕ್ಕೂ ಹೆಚ್ಚು ಮಂದಿ ಹನಿಟ್ರ್ಯಾಪ್ ಖೆಡ್ಡಾಕ್ಕೆ, ಉದ್ಯಮಿಗಳು, ವೈದ್ಯರು, ವಿದ್ಯಾರ್ಥಿಗಳೇ ಟಾರ್ಗೆಟ್

ರಾಷ್ಟ್ರೀಯ

ಗಂಡ ಹೆಂಡತಿ ಒಂದಾಗಿ ಬರೊಬ್ಬರಿ 150ಕ್ಕೂ ಹೆಚ್ಚು ಮಂದಿ ಯುವಕರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ, ಮೂರು ಕೋಟಿ ರೂ. ಗೂ ಅಧಿಕ ಹಣ ಸುಲಿಗೆ ಮಾಡಿರುವ ಆಘಾತಕಾರಿ ಘಟನೆಯೊಂದು ಅಂದ್ರಪ್ರದೇಶದ ಕರೀಂ ನಗರದಲ್ಲಿ ಬೆಳಕಿಗೆ ಬಂದಿದೆ. ಪಾಪಿ ಪತಿಯೊಬ್ಬ ತನ್ನ ಸುರ ಸುಂದರಿ ಪತ್ನಿಯನ್ನು ಅನ್ಯ ಪರಪುರುಷರ ಜೊತೆ ಮಂಚಕ್ಕೆ ಏರಿಸಿ, ಅವರ ವಿವಿಧ ಅಶ್ಲೀಲ ಭಂಗಿಗಳನ್ನು ತನ್ನ ಮೊಬೈಲ್ ಪೋನಿನಲ್ಲಿ ಸೆರೆ ಹಿಡಿದು, ದಂಪತಿಗಳಿಬ್ಬರೂ ಒಟ್ಟು ಸೇರಿ ಬರೋಬ್ಬರಿ 150ಕ್ಕೂ ಹೆಚ್ಚು ಮಂದಿ ಯುವಕರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ, ಬ್ಲಾಕ್ ಮೈಲ್ ಮಾಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಘಟನೆ ಕರೀಂ ನಗರದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಕರೀಂನಗರ ನಿವಾಸಿಗಳಾದ ದಂಪತಿ ಅನ್ಯ ಪುರುಷರನ್ನು ಪುಸಲಾಯಿಸಿ ಅವರನ್ನು ಹನಿಟ್ರ್ಪಾಪ್ ಗೆ ಬಳಸಿಕೊಂಡಿದ್ದಾರೆ. ಬಳಿಕ ಅವರ ಅಶ್ಲೀಲ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಅದನ್ನು ತೋರಿಸಿ ಅವರನ್ನು ಬ್ಲಾಕ್ ಮೇಲ್ ಮಾಡಿ ಕೋಟ್ಯಂತರ ಹಣ ಸಂಗ್ರಹಿಸಿದ್ದಾರೆ. ಈ ದಂಪತಿಗಳು ಹಲವು ಸಮಯಗಳಿಂದ ಕರೀಂನಗರದ ಅರೆಪಲ್ಲಿ ಶ್ರೀ ಸಾಯಿ ನಿವಾಸ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಪತಿ ಮಾರ್ಬಲ್ ವ್ಯವಹಾರ ನಡೆಸುತ್ತಿದ್ದರೆ, ಪತ್ನಿ ಸಾಮಾಜಿಕ ಮಾಧ್ಯಮದ ಮೂಲಕ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಳು. ವ್ಯವಹಾರದಲ್ಲಿ ಉಂಟಾದ ನಷ್ಟಗಳು, ಹೆಚ್ಚಿದ ಸಾಲಗಳು ಮತ್ತು ಆರ್ಥಿಕ ಹೊರೆ ನಿಭಾಯಿಸಲಾಗದೇ ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಹನಿಟ್ರ್ಯಾಪ್ ಗೆ ಮುಂದಾಗಿದ್ದರು ಎನ್ನಲಾಗಿದೆ.

ಪತ್ನಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಆಕರ್ಷಕ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಯುವಕರು ಮತ್ತು ಉದ್ಯಮಿಗಳನ್ನು ಆಕರ್ಷಿಸುತ್ತಿದ್ದಳು. ತನ್ನನ್ನು ಸಂಪರ್ಕಿಸುವವರೊಂದಿಗೆ ಒಪ್ಪಂದ ಮಾತನಾಡಿಕೊಂಡು ಅವರನ್ನು ತನ್ನ ನಿವಾಸಕ್ಕೆ ಆಹ್ವಾನಿಸುತ್ತಿದ್ದಳು. ಅವರು ಏಕಾಂತದಲ್ಲಿರುವಾಗ ಆಕೆಯ ಪತಿ ತನ್ನ ಮೊಬೈಲ್ ಫೋನ್‌ನಲ್ಲಿ ರಹಸ್ಯವಾಗಿ ನಗ್ನ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದ. ಈ ಘಟನೆಯಲ್ಲಿ ಆಕೆಯ ಪತಿಯ ಪ್ರಮುಖ ಸೂತ್ರಧಾರನಾಗಿದ್ದು, ಆತನೇ ತನ್ನ ಪತ್ನಿ ಮೂಲಕ ಪರ ಪುರುಷರನ್ನು ಆಪಾರ್ಟ್ ಮೆಂಟ್ ಗೆ ಕರೆದು ತನ್ನ ಪತ್ನಿಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡುತ್ತಿದ್ದ. ಬಳಿಕ ಅದರ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ. ಹೀಗೇ ಈ ಜೋಡಿ ಸಂತ್ರಸ್ಥರಿಂದ ಕೋಟ್ಯಂತರ ಹಣ ಸುಲಿಗೆ ಮಾಡಿದೆ. ದಂಪತಿಗಳು ಈ ವೀಡಿಯೊಗಳನ್ನು ತೋರಿಸಿ ಬಲಿಪಶುಗಳನ್ನು ಹೆದರಿಸಿ ಅಪಾರ ಪ್ರಮಾಣದ ಹಣವನ್ನು ಸುಲಿಗೆ ಮಾಡುತ್ತಿದ್ದರು. ಈ ಅಕ್ರಮ ಆದಾಯದಿಂದ ಅವರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು. ಸರಿ ಸುಮಾರು 150ಕ್ಕೂ ಹೆಚ್ಚು ಜನರನ್ನು ಬಲೆಗೆ ಬೀಳಿಸಿದ್ದಾರೆ ಎಂದು ವರದಿಯಾಗಿದೆ.

ಕರೀಂನಗರದ ವ್ಯಕ್ತಿಯೊಬ್ಬ ಕಳೆದ ಒಂದು ವರ್ಷದಿಂದ ಅವರ ಬಳಿಗೆ ಹೋಗುತ್ತಿದ್ದ. ಅತನಿಂದ ಈ ಜೋಡಿ ಸುಮಾರು 14 ಲಕ್ಷ ರೂ.ಗಳನ್ನು ಸಂಗ್ರಹಿಸಿತ್ತು. ಅಲ್ಲದೆ ಹೆಚ್ಚುವರಿಯಾಗಿ 5 ಲಕ್ಷ ರೂ. ಗಳನ್ನು ನೀಡದಿದ್ದರೆ ವೀಡಿಯೊಗಳು ವೈರಲ್ ಮಾಡುವುದಾಗಿ ಮತ್ತು ಆತನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಇದರಿಂದ ತಲ್ಲಣಿಸಿದ ಆತ ತನ್ನ ಜೀವಕ್ಕೆ ಹೆದರಿ ಕರೀಂನಗರ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಪ್ರಕರಣದ ವಿಚಾರಣೆಗೆ ಪೊಲೀಸರು ಮುಂದಾದಾಗ ಇಡೀ ಪ್ರಕರಣ ಬ್ರಹ್ಮಾಂಡ ರಹಸ್ಯ ಬಯಲಾಗಿದೆ. ದಂಪತಿಗಳು ಕಳೆದ ಮೂರು ವರ್ಷಗಳಿಂದ ನೂರಕ್ಕೂ ಹೆಚ್ಚು ಉದ್ಯಮಿಗಳು, ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.