ಟೊಪ್ಪಿ ನೌಫಲ್ ಹತ್ಯೆಗೆ ರಿವೇಂಜಾ..? ತೊಕ್ಕೊಟ್ಟಿನಲ್ಲಿ ಈ ಹಿಂದೆ ನಡೆದಿತ್ತು ರೌಡಿ ಶೀಟರ್ ಸಮೀರ್ ಕಡಪ್ಪುರ ಡೆಡ್ಲಿ ಹತ್ಯೆ.!
ತಣ್ಣನೆ ಮಲಗಿದ್ದ ಮಂಗಳೂರು ಗ್ಯಾಂಗ್ ವಾರ್ ಮತ್ತೆ ಧುತ್ತನೆ ಎದ್ದು ನಿಂತಿದೆ. ಇಂದು ಬೆಳ್ಳಂಬೆಳಗ್ಗೆ ನಡೆದ ಟ್ಯಾಬ್ಲೆಟ್ ಆರೀಫ್ ಮರ್ಡರ್ ಮೂಲಕ ಮತ್ತೆ ರಕ್ತರಂಜಿತ ಕಥೆ ಬಿಚ್ಚತೊಡಗಿದೆ. ಬಂದರ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ ಆರೀಫ್ ಯಾನೆ ಟ್ಯಾಬ್ಲೆಟ್ ಆರೀಫ್ ನಂತರ ತನ್ನ ವಾಸಸ್ಥಾನವನ್ನು ತಲಪಾಡಿಗೆ ಬದಲಾಯಿಸಿಕೊಂಡಿದ್ದ. ಬಂದರು ಧಕ್ಕೆಯಲ್ಲಿ ಮೀನಿನ ವ್ಯಾಪಾರ ಮಾಡಿಕೊಂಡಿದ್ದ ಆರೀಫ್ ಎಂದಿನಂತೆ ಬೆಳ್ಳಂಬೆಳಗ್ಗೆ ಬೈಕಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಅಡ್ಡಗಟ್ಟಿ ಪಕ್ಕಾ ಪ್ಲ್ಯಾನ್ ಮಾಡಿ ಹಂತಕ ಪಡೆ ಕೊಚ್ಚಿ ಕೊಂದು ಹಾಕಿದೆ.
ತೊಕ್ಕೊಟ್ಟು ಪ್ಲೈ ಓವರ್ ನಲ್ಲಿ ಆರೀಫ್ ಕಥೆ ಮುಗಿಸಿದ್ದಾರೆ ಹಂತಕ ಪಡೆ. ತೊಕ್ಕೊಟ್ಟು ಅಂದಾಗ ನೆನಪಿಗೆ ಬರುವುದೇ ಸಮೀರ್ ಕಡಪ್ಪುರ ಡೆಡ್ಲಿ ಮರ್ಡರ್. ನಟೋರಿಯಸ್ ರೌಡಿ ಟಾರ್ಗೆಟ್ ಇಲ್ಯಾಸ್ ನ ಮನೆಗೆ ನುಗ್ಗಿ ಅಡ್ಡಡ್ಡ ಸೀಳಿದ್ದ ಪರಮ ಪಾತಕಿ ಸಮೀರ್ ಕಡಪ್ಪುರ 2024 ಅಗಸ್ಟ್ 11 ರಂದು ತೊಕ್ಕೊಟ್ಟು ಕಲ್ಲಾಪು ರೆಸ್ಟೋರೆಂಟ್ ಗೆ ತಾಯಿ, ಪತ್ನಿ ಮಕ್ಕಳೊಂದಿಗೆ ಬಂದಿದ್ದ. ಪಂಪ್ ವೆಲ್ ಗೆ ಹೋಗುವವನಿದ್ದ ಸಮೀರ್ ಗೆ ಆತನಿಗೆ ಬಂದಿದ್ದ ಫೋನ್ ಕರೆಯೇ ಕೊನೆಯ ಕರೆಯಾಗಿತ್ತು. ಆಪ್ತನೊಬ್ಬನ ಪೋನ್ ಕರೆ ನಂಬಿ ಕಲ್ಲಾಪು ಬಳಿ ರೆಸ್ಟೋರೆಂಟ್ ಗೆ ಇಳಿದು ಹೋಗುವಷ್ಟರಲ್ಲಿ ಫಾಲೋ ಮಾಡಿದ ಹಂತಕ ಪಡೆ ಅಟ್ಟಾಡಿಸಿ ಕೊಚ್ಚಿ ಕೊಂದು ಹಾಕಿತ್ತು.

ಆತ ನೌಫಲ್. ಪಾತಕ ಫೀಲ್ಡ್ ನಲ್ಲಿ ಟೊಪ್ಪಿ ನೌಫಲ್ ಎಂದೇ ಗುರುತಿಸಿಕೊಂಡಿದ್ದ. 2025 ರ ನವೆಂಬರ್ ತಿಂಗಳಲ್ಲಿ ಮಂಜೇಶ್ವರ ಉಪ್ಪಳ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಬಳಿ ಹತ್ಯೆ ಮಾಡಲಾಗಿತ್ತು. ಫರಂಗಿಪೇಟೆ ಡಬ್ಬಲ್ ಮರ್ಡರ್ ಸೇರಿದಂತೆ ಹಲವು ಪಾತಕ ಕೃತ್ಯಗಳಲ್ಲಿ ಭಾಗಿಯಾಗಿ ರೌಡಿಸಂ ಫೀಲ್ಡ್ ನಲ್ಲಿ ನಟೋರಿಯಸ್ ಆಗಿ ಗುರುತಿಸಿಕೊಂಡಿದ್ದ. ಟೊಪ್ಪಿ ನೌಫಲ್ ನದ್ದು ಮೇಲ್ನೋಟಕ್ಕೆ ರಿವೇಂಜ್ ಗೇಮ್ ರೀತಿ ಕಂಡುಬಂದಿದ್ದರೂ ಕೇರಳ ಭಾಗದಲ್ಲಿ ಈ ಹತ್ಯೆ ನಡೆದಿದ್ದುದರಿಂದ ಕೇಸ್ ಕ್ಲೋಸ್ ಆಗಿತ್ತು. ರೈಲು ಬಡಿದು ಸಾವು ಅನ್ನುವ ಕಥೆ ಕಟ್ಟಲಾಗಿತ್ತು. ಆದರೆ ಕರಾವಳಿ ಭಾಗದಲ್ಲಿ ಇದೊಂದು ಹತ್ಯೆ ಅನ್ನುವ ಮಾತುಗಳು ಹರಿದಾಡಿತ್ತು. ಇದರ ಹಿಂದೆ ಕೆಲವರ ಕೈವಾಡದ ಬಗ್ಗೆಯೂ ಮಾತು ಹರಿದಾಡಿತ್ತು. ನೌಫಲ್ ನಿಗೂಢ ಹತ್ಯೆಗೆ ರಿವೇಂಜ್ ನಡೆಯಲಿದೆ ಅನ್ನುವ ಮಾತುಗಳು ಹರಿದಾಡಿತ್ತು.

ಆದರೆ ಇದೀಗ ತೊಕ್ಕೊಟ್ಟಿನಲ್ಲಿ ಟ್ಯಾಬ್ಲೆಟ್ ಆರೀಫ್ ನ ಹೆಣ ಬಿದ್ದಿದೆ. ಗ್ಯಾಂಗ್ ವಾರ್ ಗೆ ಸಂಬಂಧಿಸಿದ ಹತ್ಯೆ ಅನ್ನುವ ಮಾತುಗಳು ಹರಿದಾಡುತ್ತಿದೆ. ಈ ಹಿಂದೆ ಹತ್ಯೆಯಾದ ಟೊಪ್ಪಿ ನೌಫಲ್ ತಂಡ ಇದೇ ಆರೀಫ್ ಮೇಲೆ ಭೀಕರ ತಲವಾರು ದಾಳಿ ನಡೆಸಿತ್ತು. ಆದರೆ ಅದೃಷ್ಟವಶಾತ್ ಅವತ್ತು ಆರೀಫ್ ಬಚವಾಗಿದ್ದ. ಆದರೆ ಇದೀಗ ಆರೀಫ್ ನ ಹತ್ಯೆಯಾಗಿದೆ. ಇದರ ಹಿಂದೆ ನೌಫಲ್ ತಂಡದವರ ಕೈವಾಡವಿದೆಯಾ.? ನೌಫಲ್ ಹತ್ಯೆಗೆ ರಿವೇಂಜ್ ಆಗಿ ಆರೀಫ್ ಮರ್ಡರ್ ನಡೆದಿದೆಯಾ.? ಅಥವಾ ಬೇರೆಯದ್ದೇ ಕಾರಣವಿದೆಯಾ.? ಎಲ್ಲದಕ್ಕೂ ಪೊಲೀಸ್ ಇಲಾಖೆಯ ತನಿಖೆಯಿಂದ ಉತ್ತರ ದೊರಕಬೇಕಿದೆ.
